ಬುಧವಾರ, ಏಪ್ರಿಲ್ 01, 2015

ಒಗ್ಗೂಡದಿದ್ದರೆ ಉಳಿಗಾಲವಿಲ್ಲ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.


ಇನ್ನು ಮುಂದಿನ ದಿನಗಳಲ್ಲಿ ತೆಂಕಣ ಬಾರತೀಯರ ನಡೆನುಡಿಗಳ ಮೇಲೆ ಹೊರಗಣ ಒತ್ತಡಗಳು ಹೆಚ್ಚುವ ಎಲ್ಲಾ ಲಕ್ಶಣಗಳೂ ಕಾಣಿಸುತ್ತಿವೆ, ಇಂತಹ ಒಂದು ಬಿಕ್ಕಟ್ಟಿನ ಸಮಯದಲ್ಲಿ ದ್ರಾವಿಡ ನುಡಿಗರಾದ ನಾವು ದಕ್ಶಿಣದ ಮಂದಿ ಒಟ್ಟಾಗಿ ಸಮಸ್ಯೆಗಳನ್ನು ಎದುರಿಸುವುದು ಒಳ್ಳೆಯದು ಎಂಬುದರ ಬಗ್ಗೆ ಯಾರೂ ಒಪ್ಪದೇ ಇರರು. ಈ ವಿಶಯವಾಗಿ ಕಳೆದ ರವಿವಾರ (ಮಾರ‍್ಚ್ ೨೯, ೨೦೧೫) ಕಬ್ಬನ್ ಪಾರ‍್ಕಿನಲ್ಲಿ ಬೆಂಗಳೂರಿನ ದ್ರಾವಿಡ ನುಡಿಗರ ಕೆಲ ಕೂಟಗಳ ಪ್ರತಿನಿದಿಗಳಾದ ನಾವು ಅನವ್‍ಪಚಾರಿಕವಾಗಿ ಸೇರಿದ್ದೆವು.

ಚರ‍್ಚೆಯಲ್ಲಿ ಪಾಲ್ಗೊಂಡಿದ್ದವರು (ಎಡದಿಂದ ಬಲಕ್ಕೆ):
ಮುತ್ತು (ಕನ್ನಡ-ತಮಿಳು ಸವುಹಾರ‍್ದ ಟ್ರಸ್ಟ್), ಸುದೇವ್ ಪುದೆಂಚಿರ (EMS ಪದನವೇದಿ, ಮಲಯಾಳಮ್), ಅಂಬ್ರೋಸ್ (ಸಂತ ಮೇರಿ ಅಸೋಸಿಯೇಶನ್, ತಮಿಳು), ವಿ.ಎಸ್.ಕ್ರಿಶ್ಣ (ಕನ್ನಡ-ತಮಿಳು ಸವುಹಾರ‍್ದ ಟ್ರಸ್ಟ್), ನಾ. ಶ್ರೀದರ್ (ಬೆಂಗಳೂರಿನ ಕಯ್ಗಾರಿಕಾ ಕಂಪನಿಗಳ ಕನ್ನಡ ಸಂಗಗಳ ಒಕ್ಕೂಟ), ಹೆಗ್ಗೆರೆ ರಾಜ್ (ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗ), ಮುರಳಿ ("ಗೋ ಬಡ್ಡಿ" ಸಂಗಟನೆ, ಕನ್ನಡ), ಶ್ರೀ ಮಾರನ್ (ಬೆಂಗಳೂರು ತಮಿಳ್ ಸಂಗಮ್), ಮಹೇಶ್ ಬಾಬು ಸುರ‍್ವೇ (ಪತ್ರಕರ‍್ತರ ವೇದಿಕೆ, ಕನ್ನಡ), ಮಿತುನ್ ಶೆಟ್ರು (ಸಾಮಾನ್ಯ ಕನ್ನಡಿಗ ಸಂಗಟನೆ).
ಈ ಚಿತ್ರವನ್ನು ತೆಗೆದ ಶ್ರೀ ಮಣಿಶಂಕರ ರಾಜು (ಕರ‍್ನಾಟಕ ಅಂಗವಿಕಲರ ಕ್ರೀಡಾ ಸಂಸ್ತೆ) ಕೂಡಾ ಚರ‍್ಚೆಯಲ್ಲಿ ಪಾಲ್ಗೊಂಡಿದ್ದರು.

ನನ್ನ ಕೋರಿಕೆಗೆ ಓಗೊಟ್ಟ ಈ ಎಲ್ಲ ಸಹ್ರುದಯರಿಗೂ ನಾನು ರುಣಿ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್