ಸೋಮವಾರ, ನವೆಂಬರ್ 09, 2015

ಪ್ರಾದೇಶಿಕತೆಯ ಮುಂದಾಳು ಶ್ರೀ ದತ್ತ ಅವರೊಡನೆ ನಮ್ಮ ತಂಡ

ಕಳೆದ ರವಿವಾರ ನವಂಬರ್ ೮ ರಂದು ನಮ್ಮ ಬಳಗದವರು, ನಮ್ಮ ನಾಡಿನ ಕೆಲವೇ ಕೆಲವು ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾದ ಶ್ರೀ ದತ್ತ ಅವರನ್ನು ಅವರ ಮನೆಯಲ್ಲಿ ಕಂಡುಬಂದೆವು. ಶ್ರೀಯುತರು ಕನ್ನಡಿಗರಲ್ಲಿ ಪ್ರಾದೇಶಿಕತೆಯ ಅರಿವನ್ನು ಹರಡುವ ಬಗೆಗೆ ಹಲವು ಪರಿಣಾಮಕಾರಿ ಆಲೋಚನೆಗಳನ್ನು ನಮ್ಮೊಡನೆ ಹಂಚಿಕೊಂಡರು.



ಸೋಮವಾರ, ಸೆಪ್ಟೆಂಬರ್ 14, 2015

ಕಳಸ-ಬಂಡೂರಿ ಹೋರಾಟಕ್ಕೆ ಬೆಂಬಲ

ಕಳಸ-ಬಂಡೂರಿ ಹೋರಾಟಕ್ಕೆ ಬೆಂಬಲ ತೋರುವ ಸಲುವಾಗಿ, ನಮ್ಮ ಬಳಗದವರು ಇನ್ನಿತರ ಜಾಲತಾಣದ ಬಳಗಗಳೊಡನೆ ಸೇರಿ, ಕಳೆದ ರವಿವಾರ ಬೆಂಗಳೂರಿನ ಪುರಬವನದ ಮುಂದೆ ನಡೆಸಿದ ದರಣಿಯ ಒಂದು ನೋಟ.


ಬುಧವಾರ, ಮೇ 27, 2015

ಪ್ರಾದೇಶಿಕತೆಯ ಉಳಿವಿಗಾಗಿ ಒಂದು ಹೊಸ ಒಕ್ಕೂಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.


ಹಲವಾರು ವರ್‌ಶಗಳಿಂದ ಕನ್ನಡಿಗರ ಏಳಿಗೆಗಾಗಿ ದುಡಿಯುತ್ತಿರುವ ಶ್ರೀಮತಿ ವಿನುತಾ ಅವರು ಇತ್ತೀಚೆಗೆ ಕನ್ನಡ ಸಂಗಟನೆಗಳ ಒಕ್ಕೂಟವೊಂದನ್ನು ಹುಟ್ಟುಹಾಕಿದ್ದಾರೆ. ಈ ಕಾರ್‌ಯದಲ್ಲಿ ನಮ್ಮ ಬಳಗ ಅವರೊಡನೆ ಕಯ್ಜೋಡಿಸಿದೆ. ಕಡ್ಡಾಯ ಹಿಂದೀ ಕಲಿಕೆ ಮುಂತಾದ ಅನಿಶ್ಟಗಳನ್ನು ತೊಡೆದು ಹಾಕುವುದು ಒಕ್ಕೂಟದ ಗುರಿ. ಒಕ್ಕೂಟದ ಮೊದಲ ಸಬೆ ಕಳೆದ ರವಿವಾರ ನಡೆಯಿತು. ಹಲವು ಸಂಗಟನೆಗಳ ಪ್ರತಿನಿದಿಗಳು ಪಾಲ್ಗೊಂಡಿದ್ದ ಆ ಸಬೆಯ ಒಂದು ಚಿತ್ರ ಇದು. ಒಕ್ಕೂಟದ ಜಾಲತಾಣ ಬೇಗನೇ ಏರ್‌ಪಡಲಿದೆ.

ನಲ್ಮೆಯಿಂದ,
ಎಚ್.ಎಸ್.ರಾಜ್

ಬುಧವಾರ, ಏಪ್ರಿಲ್ 01, 2015

ಒಗ್ಗೂಡದಿದ್ದರೆ ಉಳಿಗಾಲವಿಲ್ಲ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.


ಇನ್ನು ಮುಂದಿನ ದಿನಗಳಲ್ಲಿ ತೆಂಕಣ ಬಾರತೀಯರ ನಡೆನುಡಿಗಳ ಮೇಲೆ ಹೊರಗಣ ಒತ್ತಡಗಳು ಹೆಚ್ಚುವ ಎಲ್ಲಾ ಲಕ್ಶಣಗಳೂ ಕಾಣಿಸುತ್ತಿವೆ, ಇಂತಹ ಒಂದು ಬಿಕ್ಕಟ್ಟಿನ ಸಮಯದಲ್ಲಿ ದ್ರಾವಿಡ ನುಡಿಗರಾದ ನಾವು ದಕ್ಶಿಣದ ಮಂದಿ ಒಟ್ಟಾಗಿ ಸಮಸ್ಯೆಗಳನ್ನು ಎದುರಿಸುವುದು ಒಳ್ಳೆಯದು ಎಂಬುದರ ಬಗ್ಗೆ ಯಾರೂ ಒಪ್ಪದೇ ಇರರು. ಈ ವಿಶಯವಾಗಿ ಕಳೆದ ರವಿವಾರ (ಮಾರ‍್ಚ್ ೨೯, ೨೦೧೫) ಕಬ್ಬನ್ ಪಾರ‍್ಕಿನಲ್ಲಿ ಬೆಂಗಳೂರಿನ ದ್ರಾವಿಡ ನುಡಿಗರ ಕೆಲ ಕೂಟಗಳ ಪ್ರತಿನಿದಿಗಳಾದ ನಾವು ಅನವ್‍ಪಚಾರಿಕವಾಗಿ ಸೇರಿದ್ದೆವು.

ಚರ‍್ಚೆಯಲ್ಲಿ ಪಾಲ್ಗೊಂಡಿದ್ದವರು (ಎಡದಿಂದ ಬಲಕ್ಕೆ):
ಮುತ್ತು (ಕನ್ನಡ-ತಮಿಳು ಸವುಹಾರ‍್ದ ಟ್ರಸ್ಟ್), ಸುದೇವ್ ಪುದೆಂಚಿರ (EMS ಪದನವೇದಿ, ಮಲಯಾಳಮ್), ಅಂಬ್ರೋಸ್ (ಸಂತ ಮೇರಿ ಅಸೋಸಿಯೇಶನ್, ತಮಿಳು), ವಿ.ಎಸ್.ಕ್ರಿಶ್ಣ (ಕನ್ನಡ-ತಮಿಳು ಸವುಹಾರ‍್ದ ಟ್ರಸ್ಟ್), ನಾ. ಶ್ರೀದರ್ (ಬೆಂಗಳೂರಿನ ಕಯ್ಗಾರಿಕಾ ಕಂಪನಿಗಳ ಕನ್ನಡ ಸಂಗಗಳ ಒಕ್ಕೂಟ), ಹೆಗ್ಗೆರೆ ರಾಜ್ (ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗ), ಮುರಳಿ ("ಗೋ ಬಡ್ಡಿ" ಸಂಗಟನೆ, ಕನ್ನಡ), ಶ್ರೀ ಮಾರನ್ (ಬೆಂಗಳೂರು ತಮಿಳ್ ಸಂಗಮ್), ಮಹೇಶ್ ಬಾಬು ಸುರ‍್ವೇ (ಪತ್ರಕರ‍್ತರ ವೇದಿಕೆ, ಕನ್ನಡ), ಮಿತುನ್ ಶೆಟ್ರು (ಸಾಮಾನ್ಯ ಕನ್ನಡಿಗ ಸಂಗಟನೆ).
ಈ ಚಿತ್ರವನ್ನು ತೆಗೆದ ಶ್ರೀ ಮಣಿಶಂಕರ ರಾಜು (ಕರ‍್ನಾಟಕ ಅಂಗವಿಕಲರ ಕ್ರೀಡಾ ಸಂಸ್ತೆ) ಕೂಡಾ ಚರ‍್ಚೆಯಲ್ಲಿ ಪಾಲ್ಗೊಂಡಿದ್ದರು.

ನನ್ನ ಕೋರಿಕೆಗೆ ಓಗೊಟ್ಟ ಈ ಎಲ್ಲ ಸಹ್ರುದಯರಿಗೂ ನಾನು ರುಣಿ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ಜನವರಿ 06, 2015

ಮತದಾರರಿಂದ ಶಾಸಕರಿಗೆ ಸಂದೇಶ

ಗೆಳೆಯರೆ,

ಅದೇಕೋ ಏನೋ ನಮ್ಮ ಶಾಸಕರು ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆಯಾಗುತ್ತಿರುವುದಕ್ಕೆ ಎದಿರೊಡ್ಡಿಲ್ಲ. ಶಾಸಕರು ಒಪ್ಪಿದರೆ ನಮ್ಮ ಮೆಟ್ರೋದಿಂದ ಹಿಂದಿಯನ್ನು ತೆಗೆಸುವುದು ಅರಿದಲ್ಲ. ಮತದಾರರೇ ಹೇಳಿದರೆ ಶಾಸಕರು ಒಪ್ಪಬಹುದು. ಆದ್ದರಿಂದ, ಸಮಸ್ಯೆಯನ್ನು ನೇರವಾಗಿ ಜನರ ಬಾಯಿಂದಲೇ ಶಾಸಕರ ಅರಿವಿಗೆ ತರಿಸುವ ಉದ್ದೇಶದಿಂದ, ಇನ್ನುಮುಂದೆ ಕಿರು ಸಂದೇಶವೊಂದನ್ನು ನಮ್ಮ ಬಳಗದ ವ್ಯಾನಿನಿಂದ ಅವಕಾಶ ಸಿಕ್ಕಿದಾಗಲೆಲ್ಲ ಜನರಿಗೆ ಕೊಡಲಾಗುವುದು.
      ಇದಕ್ಕಾಗಿ ಪ್ರಯೋಗವೊಂದನ್ನು ಇತ್ತೀಚೆಗೆ ಬೆಂಗಳೂರಿನ ಹಿರಿದಾರಿಯೊಂದರ ಬದಿಯಲ್ಲಿ ಮಾಡಿನೋಡಿದೆವು. ಅದರ ವಿಡಿಯೋ ತುಣುಕು ಇಲ್ಲಿದೆ (ಬರಿಯ ಉಪಕರಣದ ಪ್ರಯೋಗವಾದದ್ದರಿಂದ ಸಂದೇಶವನ್ನು ಕೇಳುವ ಜನರು ಬೇಕಾಗಲಿಲ್ಲ).
      ಇದೇ ಸಂದೇಶವನ್ನು ಒಂದು ನಿಮಿಶಕ್ಕೆ ಮೊಟಕುಗೊಳಿಸಿ, ಬೆಂಗಳೂರಿನ ಬೇರೆಬೇರೆಡೆಗಳಲ್ಲಿ ಮನೆಮನೆಗಳಿಗೇ ಕೊಂಡೊಯ್ಯೋಣ. ಬೇಕೆನಿಸಿದರೆ, ನಿಮ್ಮದೇ ಕಿರುಸಂದೇಶಗಳ MP3 ತುಣುಕುಗಳನ್ನು ಕಳಿಸಿಕೊಡಿ (kannadigarudravidare@gmail.com). ಚೆನ್ನಾಗಿದ್ದರೆ ಅವನ್ನೂ ಬಳಸೋಣ.

ಸಂದೇಶವನ್ನು ನುಡಿದವರು: ಎಚ್. ಎಸ್. ರಾಜ್
ವಾದ್ಯಸಂಗೀತ: The Bella Beth ಎಂಬ facebook ತಾಣದ ಕೊಡುಗೆ

ನಲ್ಮೆಯಿಂದ,
ಎಚ್.ಎಸ್. ರಾಜ್