ಮಂಗಳವಾರ, ಜನವರಿ 06, 2015

ಮತದಾರರಿಂದ ಶಾಸಕರಿಗೆ ಸಂದೇಶ

ಗೆಳೆಯರೆ,

ಅದೇಕೋ ಏನೋ ನಮ್ಮ ಶಾಸಕರು ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆಯಾಗುತ್ತಿರುವುದಕ್ಕೆ ಎದಿರೊಡ್ಡಿಲ್ಲ. ಶಾಸಕರು ಒಪ್ಪಿದರೆ ನಮ್ಮ ಮೆಟ್ರೋದಿಂದ ಹಿಂದಿಯನ್ನು ತೆಗೆಸುವುದು ಅರಿದಲ್ಲ. ಮತದಾರರೇ ಹೇಳಿದರೆ ಶಾಸಕರು ಒಪ್ಪಬಹುದು. ಆದ್ದರಿಂದ, ಸಮಸ್ಯೆಯನ್ನು ನೇರವಾಗಿ ಜನರ ಬಾಯಿಂದಲೇ ಶಾಸಕರ ಅರಿವಿಗೆ ತರಿಸುವ ಉದ್ದೇಶದಿಂದ, ಇನ್ನುಮುಂದೆ ಕಿರು ಸಂದೇಶವೊಂದನ್ನು ನಮ್ಮ ಬಳಗದ ವ್ಯಾನಿನಿಂದ ಅವಕಾಶ ಸಿಕ್ಕಿದಾಗಲೆಲ್ಲ ಜನರಿಗೆ ಕೊಡಲಾಗುವುದು.
      ಇದಕ್ಕಾಗಿ ಪ್ರಯೋಗವೊಂದನ್ನು ಇತ್ತೀಚೆಗೆ ಬೆಂಗಳೂರಿನ ಹಿರಿದಾರಿಯೊಂದರ ಬದಿಯಲ್ಲಿ ಮಾಡಿನೋಡಿದೆವು. ಅದರ ವಿಡಿಯೋ ತುಣುಕು ಇಲ್ಲಿದೆ (ಬರಿಯ ಉಪಕರಣದ ಪ್ರಯೋಗವಾದದ್ದರಿಂದ ಸಂದೇಶವನ್ನು ಕೇಳುವ ಜನರು ಬೇಕಾಗಲಿಲ್ಲ).
      ಇದೇ ಸಂದೇಶವನ್ನು ಒಂದು ನಿಮಿಶಕ್ಕೆ ಮೊಟಕುಗೊಳಿಸಿ, ಬೆಂಗಳೂರಿನ ಬೇರೆಬೇರೆಡೆಗಳಲ್ಲಿ ಮನೆಮನೆಗಳಿಗೇ ಕೊಂಡೊಯ್ಯೋಣ. ಬೇಕೆನಿಸಿದರೆ, ನಿಮ್ಮದೇ ಕಿರುಸಂದೇಶಗಳ MP3 ತುಣುಕುಗಳನ್ನು ಕಳಿಸಿಕೊಡಿ (kannadigarudravidare@gmail.com). ಚೆನ್ನಾಗಿದ್ದರೆ ಅವನ್ನೂ ಬಳಸೋಣ.

ಸಂದೇಶವನ್ನು ನುಡಿದವರು: ಎಚ್. ಎಸ್. ರಾಜ್
ವಾದ್ಯಸಂಗೀತ: The Bella Beth ಎಂಬ facebook ತಾಣದ ಕೊಡುಗೆ

ನಲ್ಮೆಯಿಂದ,
ಎಚ್.ಎಸ್. ರಾಜ್