ಮಂಗಳವಾರ, ಅಕ್ಟೋಬರ್ 14, 2014

ಮಂದಿಯಿರುವೆಡೆಗೆ ಸಂದೇಶ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

For the English version of this write-up go to (https://www.facebook.com/groups/kannadigarudravidare/)


ಗೆಳೆಯರೆ,
ಸಾಮಾನ್ಯವಾಗಿ, ಬೆಂಗಳೂರಿನಲ್ಲಿ ಒಂದು ಕಾರ್‌ಯಕ್ರಮವನ್ನು ನಡೆಸಬೇಕೆಂದರೆ, ವಾರಗಟ್ಟಳೆ ಮುಂಚೆಯೇ ಸಬಾಮಂದಿರವನ್ನು ಕಾಯ್ದಿರಿಸಬೇಕಾಗುತ್ತದೆ. ಬಾಶಣ ಮಾಡಿಸುವುದಕ್ಕೆ ಹಲವು ಅತಿತಿಗಳನ್ನು ಒಪ್ಪಿಸಿ ಕರೆತರಬೇಕಾಗುತ್ತದೆ. ಇನ್ನು ಸಬೆಗೆ ಸೇರುವವರಲ್ಲಿ ಮುಕ್ಕಾಲುವಾಸಿ ಮಂದಿ ಆಗಲೇ ನಮ್ಮ ನಿಲುವನ್ನು ಒಪ್ಪಿಕೊಂಡವರೇ ಆಗಿರುತ್ತಾರೆ. ಅವರಿಗೆ ಬಾಶಣಗಳಿಂದ ಹೊಸದೇನೂ ಸಿಗುವುದಿಲ್ಲ. ಇಂತಹ ಕಾರ್‌ಯಕ್ರಮಗಳನ್ನು ನಡೆಸಿ ಏನು ಪ್ರಯೋಜನ? ಇದರ ಮೇಲೆ ಇಂತಹ ಕಾರ್‌ಯಕ್ರಮಗಳನ್ನು ಬೇಗಬೇಗನೇ ನಡೆಸಲೂ ಆಗುವುದಿಲ್ಲ.
      ನಮ್ಮ ಸಂದೇಶ ಹೊಸ ಹೊಸ ಮಂದಿಯನ್ನು ತಲುಪಬೇಕು. ಸದಾ ಚಾಲ್ತಿಯಲ್ಲೂ ಇರಬೇಕು. ಜಾಹೀರಾತಿನ ಮಾದರಿಯಲ್ಲಿ ಕಣ್ಣಿಗೆ ಬೀಳುತ್ತಿರಬೇಕು. ಈ ಉದ್ದೇಶಗಳಿಗೆಂದೆ, ಜನಗಳು ಸೇರುವೆಡೆಗಳಿಗೆ ಆಗಾಗ್ಗೆ ನಮ್ಮ ವ್ಯಾನಿನ ಮೇಲೆ ಹೊಸ ಹೊಸ ಸಂದೇಶಗಳನ್ನು ಹೊತ್ತೊಯ್ದು ತೋರಿಸಬೇಕೆಂದು ತೀರ್‌ಮಾನಿಸಿ, ಅದರ ಪ್ರಯೋಗವನ್ನೂ ತೊಡಗಿಸಿದ್ದೇವೆ. ಈ ಪ್ರಯೋಗದ ಒಂದು ಇಣುಕು ನೋಟ ಮೇಲಿನ ಚಿತ್ರದಲ್ಲಿದೆ. ಚಿತ್ರವನ್ನು ವಿನೋದಕ್ಕಾಗಿ ಬೆಂಗಳೂರಿನ ಎಮ್.ಜಿ. ರಸ್ತೆಯ ನಮ್ಮ ಮೆಟ್ರೋ ನಿಲ್ದಾಣದ ಎದುರೇ ತೆಗೆಯಲಾಗಿದೆ.
      ಮಂದಿಯನ್ನು ಸಂದೇಶವಿರುವೆಡೆಗೆ ಕರೆತರಲು ಪ್ರಯತ್ನಿಸುವುದಕ್ಕಿಂತ , ಮಂದಿಯಿರುವೆಡೆಗೆ ಸಂದೇಶವನ್ನು ಕೊಂಡೊಯ್ಯುವುದು ಉತ್ತಮ ತಾನೆ?

ನಲ್‍ಮೆಯೊಡನೆ,
ಎಚ್.ಎಸ್. ರಾಜ್