ಸೋಮವಾರ, ಸೆಪ್ಟೆಂಬರ್ 15, 2014

ಬಳಗದ ಒಸಗೆ ತುಣುಕು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

For the English version of this write-up go to (https://www.facebook.com/groups/kannadigarudravidare/)


ಗೆಳೆಯರೆ,
ಕೆಲ ತಿಂಗಳುಗಳ ಹಿಂದೆ, "ಇಂಗ್ಲೀಶ್ ಕಲಿಸಿ - ಹಿಂದೀ ಕಳಿಸಿ" ಅರುಹುನಡೆಯನ್ನು ತೊಡಗಿಸುವ ವೇಳೆಗೆ, ಮಾಗಡಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಓಡಾಡಿ, ಸಬೆ ನಡೆಸಲು ಅಲ್ಲಿ ಯಾವ ಸವುಲಬ್ಯಗಳಿವೆ ಎಂಬುದನ್ನು ಕೊಂಚ ನೋಡಿದೆ. ಆಗ ನನಗೆ ಅನಿಸಿತು - "ಹಳ್ಳಿಗಳಲ್ಲಿ ಸಬೆ ನಡೆಸಬೇಕೆಂದರೆ ನಮ್ಮದೇ ಒಂದು ಸಂಚಾರಿ ವೇದಿಕೆ ಬೇಕು", ಎಂದು. ಆದ್ದರಿಂದ, ತಿಪ್ಪಸಂದ್ರದ ಕಾರ‍್ಯಕ್ರಮ ಮುಗಿದ ಮೇಲೆ, ನಮ್ಮ ಗುಂಪಿನ ಓಮ್ನಿ ವ್ಯಾನನ್ನು ಒಂದು ಸಂಚಾರಿ ವೇದಿಕೆಯನ್ನಾಗಿ ಮಾರ‍್ಪಡಿಸಲು ನಾನು ಮತ್ತು ನಮ್ಮ ಬಳಗದ ಕೆಲ ಗೆಳೆಯರು ಹೊರಟೆವು. ಹಲವಾರು ಕಾರಣಗಳಿಂದ, ಮುಕ್ಯವಾಗಿ ಬೆಂಗಳೂರಿನ ಕುಶಲಕರ‍್ಮಿಗಳ ಅಸಡ್ಡೆಯಿಂದ, ಒಂದೆರಡು ವಾರಗಳಲ್ಲಿ ಮುಗಿಯಬೇಕಾಗಿದ್ದ ಕೆಲಸ ಕೆಲವು ತಿಂಗಳನ್ನೇ ತೆಗೆದುಕೊಂಡಿತು. ಅದೇನೇ ಇರಲಿ, ಈಗ ನಮ್ಮ ವ್ಯಾನ್ ಒಂದು ಸರಳ, ಆದರೆ, ಸ್ವತಂತ್ರವಾದ ಸಂಚಾರಿ ವೇದಿಕೆಯಾಗಿ ಮಾರ‍್ಪಟ್ಟಿದೆ. ಇದರೊಡನೆ, ಸಂಚಾರಿ ಜಾಹೀರಾತಿನ ಸವುಲಬ್ಯವನ್ನೂ ಪಡೆದುಕೊಂಡಿದೆ. ಇನ್ನು ಮುಂದೆ, ನಮಗೆ ಕಾರ‍್ಯಕ್ರಮಗಳನ್ನು ನಡೆಸುವ ಕೆಲಸ ಸಾಕಶ್ಟು ಹಗುರವಾಗುತ್ತದೆ.
      ಮಳೆ ಕಡಿಮೆಯಾದ ಮೇಲೆ "ಇಂಗ್ಲೀಶ್ ಕಲಿಸಿ - ಹಿಂದೀ ಕಳಿಸಿ" ಅರುಹುನಡೆ ಮುಂದುವರೆಯುತ್ತದೆ. ಅಲ್ಲಿಯವರೆಗೆ ಬೆಂಗಳೂರಿನ ಬೇರೆಬೇರೆ ಬಾಗಗಳಲ್ಲಿ ಹಿಂದೀ ಹೇರಿಕೆಯ ವಿರುದ್ದವಾಗಿ ಕೆಲ ಕಾರ‍್ಯಕ್ರಮಗಳನ್ನು ನಡೆಸಲಾಗುತ್ತದೆ. ಕಾರ‍್ಯಕ್ರಮ ನಡೆಯುವ ಎಡೆ ಮತ್ತು ಹೊತ್ತಿನ ಬಗ್ಗೆ ಮುಂದಾಗೇ ಗೆಳೆಯರಿಗೆ ನಮ್ಮ Facebook ಪುಟದಲ್ಲಿ (https://www.facebook.com/groups/kannadigarudravidare/) ತಿಳಿಸಲಾಗುವುದು. ಗೆಳೆಯರೆಲ್ಲಾ ಪಾಲ್ಗೊಳ್ಳುವಿರಿ ಎಂದು ಬಯಸುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್