ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ.
ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ
ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ.
ಡಿ.ಎನ್.ಶಂಕರ
ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ
ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’ ಓದುಗೆಗಳನ್ನು ನೋಡಿ.
ಕನ್ನಡ ಟೀವಿ ಕಾಲುವೆಯೊಂದರಲ್ಲಿ ’ಚಿಣ್ಣರ ಚಿಲಿಪಿಲಿ’ಎಂಬ, ಪುಟ್ಟ ಮಕ್ಕಳು ಪಾಲ್ಗೊಳ್ಳುವ ಜನಪ್ರಿಯ ಕಾರ‍್ಯಕ್ರಮವೊಂದು ಪ್ರಸಾರವಾಗುತ್ತಿದೆ. ಅದರಲ್ಲಿ ಇತ್ತೀಚೆಗೆ ಕೇವಲ ಕೊಡವ ಮಕ್ಕಳಶ್ಟೇ ಪಾಲ್ಗೊಂಡ ವಿಶೇಶ ಸಂಚಿಕೆಯೊಂದು ಬಿತ್ತರವಾಯಿತು. ಆ ಮಕ್ಕಳಲ್ಲಿ ಒಬ್ಬ ಪುಟಾಣಿ ಹುಡುಗಿಗೆ ’ಬೆಳಕು’ ಎಂಬ ಮುದ್ದಾದ ಹೆಸರು. ’ಬೆಳಕು’ ಅಪ್ಪಟ ಕನ್ನಡ ಪದ. ಅದು ಕೊಡವ ಪದವೂ ಆಗಿರಬಹುದೇನೋ. ಒಟ್ಟಿನಲ್ಲಿ ದ್ರಾವಿಡ ಮೂಲದ ಪದ. ಸಾಮಾನ್ಯವಾಗಿ ಬರೀ ಸಂಸ್ಕ್ರುತ ಪದಗಳಿಂದಲೇ ಮಕ್ಕಳಿಗೆ ಹೆಸರಿಡುವ ನಮ್ಮಲ್ಲಿ ಈಗೀಗ ಕನ್ನಡ ಅತವ ದ್ರಾವಿಡ ಮೂಲದ ಹೆಸರುಗಳನ್ನಿಡುವ ಪ್ರವ್ರುತ್ತಿ ಕೂಡ ಶುರುವಾಗಿದೆ. ’ನಮ್ಮ ನುಡಿಯಲ್ಲೇ ಹೆಸರಿಡೋಣ, ಸಂಸ್ಕ್ರುತವೇನೂ ಬೇಕಾಗಿಲ್ಲ’ ಎಂಬ ನಿಲುವು ಇದಕ್ಕೆ ಕಾರಣವೋ, ಇಲ್ಲ, ’ಸಾಮಾನ್ಯ ಹೆಸರು ಬೇಡ, ಯುನೀಕ್ ಆದ ಹೆಸರು ಇರಲಿ’ ಎನ್ನುವ ದೋರಣೆ ಕಾರಣವೋ, ನನಗೆ ತಿಳಿಯದು. ಆದರೆ, ಕಾರಣ ಏನಾದರೂ ಇರಲಿ, ಮತ್ತೆ ಅಚ್ಚಗನ್ನಡ ಹೆಸರುಗಳು ಚಲಾವಣೆಗೆ ಹೇಗೋ ಬರುತ್ತಿರುವುದು ಅಚ್ಚಗನ್ನಡದ ಒಲವಿಯಾದ ನನ್ನ ಕಣ್ಣಿನಲ್ಲಿ ಒಂದು ಸಂತಸದ ಸಂಗತಿ.
ಅಯ್ದಾರು ದಶಕಗಳ ಹಿಂದಿನವರೆಗೆ ಕನ್ನಡಿಗರ ಹೆಸರುಗಳು ಹೆಚ್ಚುಕಡಿಮೆ ಕನ್ನಡದ್ದೇ ಅಂದರೆ ದ್ರಾವಿಡ ಮೂಲದ ಹೆಸರುಗಳೇ ಆಗಿರುತ್ತಿದ್ದವು. ಚೆಲುವಯ್ಯ, ಕಲ್ಲಪ್ಪ, ಚೆನ್ನಣ್ಣ, ಕೆಂಪ, ಕರಿಯ, ತಾಯಕ್ಕ, ಪುಟ್ಟಮ್ಮ, ಚಿಕ್‍ತಾಯಿ, ಎಲ್ಲವ್ವ - ಹೀಗೆ ಕನ್ನಡದ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದುದೇ ರೂಡಿಯಲ್ಲಿತ್ತು. ಕೆಳಜಾತಿಯ ಮಂದಿಯಲ್ಲಿ ಇಂತಹ ಹೆಸರುಗಳೇ ಹೆಚ್ಚಾಗಿ ಕಾಣುತ್ತಿದ್ದವು. ಮೇಲುಜಾತಿಯವರಲ್ಲಿ ಸ್ವಲ್ಪ ಸಂಸ್ಕ್ರುತ ಮೂಲದ ಹೆಸರುಗಳು ಚಾಲ್ತಿಯಲ್ಲಿದ್ದು, ಆ ಹೆಸರುಗಳು ಸಾಮಾನ್ಯವಾಗಿ ನಾರಾಯಣ, ಶ್ರೀನಿವಾಸ, ರಾಮಕ್ರಿಶ್ಣ, ಸೀತಾಪತಿ ಮುಂತಾದ ದೇವರ ಹೆಸರುಗಳಾಗಿರುತ್ತಿದ್ದವು. ಬಳಿಕದ ದಿನಗಳಲ್ಲಿ ಕ್ರಮೇಣ ಕನ್ನಡದ ಹೆಸರುಗಳು ಮತ್ತು ದೇವರ ಹೆಸರುಗಳು ಕಾಣೆಯಾಗತೊಡಗಿದವು. ಸಂಸ್ಕ್ರುತ ಮೂಲದ ಪಶು, ಪಕ್ಶಿ, ವಸ್ತುಗಳ ಹೆಸರುಗಳು ಬಳಕೆಗೆ ಬರಲು ಶುರುವಾದವು. ’ಓದಿದ’ ಕನ್ನಡಿಗರು ಇಂತಹ ಸಂಸ್ಕ್ರುತ ಮೂಲದ ಹೆಸರುಗಳನ್ನು ಇಡುವುದರಲ್ಲಿ ಒಂದು ರೀತಿಯಲ್ಲಿ ಪಯ್‍ಪೋಟಿಗೇ ತೊಡಗಿದರು ಎನ್ನಬಹುದು. ಪವನ್, ಪರಾಗ್, ಕಿರಣ್, ವಸಂತ್, ಮಯೂರ್, ಸುನಿಲ್, ಸೀಮಾ, ಪುಶ್ಪ, ಸ್ನೇಹಾ, ಸಾಗರ್, ಪಂಚಮ್, ಶ್ರುತಿ, ಶ್ವೇತಾ ಮುಂತಾದ ಹೆಸರುಗಳೇ ಪುಟಿದಾಡತೊಡಗಿದವು. ಬರುಬರುತ್ತಾ ಕನ್ನಡಿಗರಲ್ಲಿ ’ತಮ್ಮ ಮಕ್ಕಳ ಹೆಸರುಗಳು ಬರೀ ಸಂಸ್ಕ್ರುತ ಮೂಲದ್ದಾದರೆ ಸಾಲದು, ಅವು ಸಾಮಾನ್ಯವಾಗಿರಬಾರದು, ಯುನೀಕ್ ಕೂಡಾ ಆಗಿರಬೇಕು’ ಎಂಬ ದೋರಣೆಯೂ ಮೂಡಿತು. ಅದರ ಪರಿಣಾಮವಾಗಿ ಆಕಾಂಕ್ಶಾ, ಪ್ರಜ್ನ್ಯಾ, ಸ್ರುಜನಾ, ಮನೋಜ್ನ್ಯಾ ಮುಂತಾದ ಕಂಡುಕೇಳದ ಹೆಸರುಗಳೂ ಚಲಾವಣೆಗೆ ಬಂದವು. ಎಶ್ಟೋ ಮಕ್ಕಳ ಹೆಸರುಗಳನ್ನು ಅವರ ತಾತ ಅಜ್ಜಿಯರಿಗೆ ಉಚ್ಚಾರಣೆ ಮಾಡುವುದೇ ಅಸಾದ್ಯವಾಯಿತು! ಒಟ್ಟಿನಲ್ಲಿ ಕನ್ನಡದ ಹಾಗೂ ದೇವರ ಹೆಸರುಗಳು ಯಾರಿಗೂ ಹಿಡಿಸದೆ ಮೂಲೆಗುಂಪಾದವು. ಸಂಸ್ಕ್ರುತದ ಹೆಸರುಗಳು ಮನೆಮನೆಯಲ್ಲೂ ಬಳಕೆಗೆ ಬಂದವು. ಸಂಸ್ಕ್ರುತದ ಹೆಸರಾದರೆ ಆಯಿತು, ಅದು ಹೇಗೇ ಇರಲಿ, ಅದಕ್ಕೆ ಸಮಾಜದ ಒಪ್ಪಿಗೆ ಕೂಡಲೇ ದೊರೆಯುವಂತಾಯಿತು. ಸಂಸ್ಕ್ರುತದ ಹೆಸರುಗಳ ಇಂತಹ ಜನಪ್ರಿಯತೆಯಿಂದಾಗಿ ’ಇನ್ನು ಕನ್ನಡದ ಹೆಸರುಗಳು ಮತ್ತೆ ಬರುವುದಿಲ್ಲ, ಅವು ಹೋಗೇ ಬಿಟ್ಟವು’ಎನ್ನುವಂತಾಯಿತು. ಆದರೂ ಅಚ್ಚರಿ ಎಂಬಂತೆ ಅಲ್ಲಲ್ಲಿ ಒಂದೊಂದು ಕನ್ನಡದ ಹೆಸರುಗಳು ಹೊಸ ರೂಪಗಳಲ್ಲಿ ತಲೆ ಎತ್ತಲು ಶುರುಮಾಡಿದವು! ಈಗೀಗ ಅವುಗಳ ಸಂಕ್ಯೆ ಹೆಚ್ಚುತ್ತಿರುವ ಹಾಗೆಯೂ ಕಾಣಿಸುತ್ತಿದೆ. ಕನ್ನಡದ ಹೆಸರುಗಳ ಬೇರು ಇನ್ನೂ ಜೀವಂತವಾಗಿರುವ ಹಾಗೆ ಕಾಣುತ್ತದೆ!
ಕೆಲ ಕನ್ನಡಿಗರು ತಮ್ಮ ಮಕ್ಕಳಿಗೆ ಅಪ್ಪಟ ಕನ್ನಡದ ಹೆಸರುಗಳನ್ನು ಇಟ್ಟಿರುವುದಕ್ಕೆ ಕೆಲವು ಎತ್ತುಗೆಗಳನ್ನು (ಉದಾಹರಣೆಗಳನ್ನು) ಕೊಡುತ್ತೇನೆ. ರಯ್ತ ಸಂಗ ಕಟ್ಟಿದ ನಂಜುಂಡಸ್ವಾಮಿಯವರ ಮಗಳ ಹೆಸರು ಚುಕ್ಕಿ. ಹೆಸರಾಂತ ಸಾಹಿತಿಗಳಾದ ದಾರವಾಡದ ಪಟ್ಟಣಶೆಟ್ಟಿ ದಂಪತಿಗಳ ಮಗಳ ಹೆಸರು ಹೂ. ಸಾಹಿತಿ ಹಾಗು ಚಿತ್ರ ನಿರ‍್ದೇಶಕ ನಾಗತಿಹಳ್ಳಿಯವರ ಇಬ್ಬರು ಹೆಣ್ಣುಮಕ್ಕಳ ಹೆಸರು ಸಿಹಿ ಮತ್ತು ಕನಸು. ಈಗ ನಮ್ಮ ನಾಡಿನ ಅಡ್ವೊಕೇಟ್ ಜನರಲ್ ಆಗಿರುವ ಹಿರಿಯ ನ್ಯಾಯವಾದಿ ರವಿವರ‍್ಮ ಕುಮಾರರ ಮಗಳ ಹೆಸರು ಬೆಳ್ಳಿ. ಇವರೆಲ್ಲಾ ಸಾಮಾನ್ಯರಲ್ಲ. ತಮ್ಮ ತಮ್ಮ ಸಾದನೆಗಾಗಿ ಹೆಸರು ಪಡೆದುಕೊಂಡಂತವರು (ಮಕ್ಕಳಿಗೆ ಹೆಸರಿಡುವ ಕಾಲಕ್ಕೆ ಇವರಿಗೆ ಇನ್ನೂ ಹೆಸರು ಬಂದಿರಲಿಕ್ಕಿಲ್ಲ. ಆಗ ಮಂದಿಯ ಕಣ್ಣಲ್ಲಿ ಇವರೂ ಸಾಮಾನ್ಯರೇ ಆಗಿದ್ದಿರಬೇಕು). ಇಂತಹ ಸಾದಕರೇ ಹೆಮ್ಮೆಯಿಂದ ತುಳಿದಂತಹ ದಾರಿಯನ್ನು ತುಳಿಯಲು ಉಳಿದವರಿಗೆ ಹಿಂಜರಿಕೆ ಆಗಲೇ ಬಾರದು ತಾನೆ? ಅಂದಹಾಗೆ, ಬೇರೆ ಕೆಲ ಕನ್ನಡಿಗರೂ ಮಕ್ಕಳಿಗೆ ಕನ್ನಡದ ಹೆಸರುಗಳನ್ನು ಇಟ್ಟಿರುವುದನ್ನು ನಾನು ನೋಡಿದ್ದೇನೆ. ನುಡಿ, ನವಿಲ್, ಇಬ್ಬನಿ, ಇಂಪು ಮುಂತಾದವು ಈ ಹೆಸರುಗಳು.
ಹಳಗನ್ನಡದಲ್ಲಿ ಕಣ್ಣಾಡಿಸಿದರೆ ’ಆದುನಿಕ’ ಎನಿಸುವ ಹಲವಾರು ಹೆಸರುಗಳು ದೊರೆಯುತ್ತವೆ. ಇನ್ನು ’ಬರೀ ಕನ್ನಡದ್ದೇ ಆಗಬೇಕಾಗಿಲ್ಲ, ಒಟ್ಟಾರೆ ದ್ರಾವಿಡ ಮೂಲದ್ದಾದರೆ ಸಾಕು’ ಎನ್ನುವುದಾದರೆ ಹೆಸರುಗಳ ಆಯ್ಕೆಗೆ ಕೊರತೆ ಇರುವುದಿಲ್ಲ. ತುಳು, ಕೊಡವ, ತಮಿಳು, ತೆಲುಗು ಮತ್ತು ಮಲಯಾಳ ಬಾಶೆಗಳಿಂದ ಹೇರಳವಾಗಿ ಹೆಸರುಗಳು ದೊರೆಯಬಹುದು. ಒಂದು ರೀತಿಯಲ್ಲಿ ಎಲ್ಲಾ ದ್ರಾವಿಡ ನುಡಿಗಳಿಂದ ಹೆಸರುಗಳನ್ನು ಹೆಕ್ಕಿಕೊಳ್ಳುವುದೇ ಒಳ್ಳೆಯದು. ಹಾಗೆ ಮಾಡುವುದರಿಂದ ’ದ್ರಾವಿಡ ನುಡಿಗಳನ್ನಾಡುವ ನಮ್ಮೆಲ್ಲರದು ಒಂದೇ ಸಮುದಾಯ’ ಎನ್ನುವ ಅರಿವಿಗೆ ಹೆಚ್ಚಿನ ಇಂಬು ಸಿಕ್ಕಂತಾಗುತ್ತದೆ.
ಇಶ್ಟೆಲ್ಲಾ ಹೇಳಿದ ಮೇಲೆ ಒಂದು ಎಚ್ಚರಿಕೆಯ ಮಾತನ್ನೂ ಹೇಳಬೇಕಾಗುತ್ತದೆ. ’ದ್ರಾವಿಡ ಹೆಸರನ್ನೇ ಇಡುತ್ತೇನೆ’ಎಂದು ಹಟಕ್ಕೆ ಬಿದ್ದು ಮಕ್ಕಳಿಗೆ ಹೇಗೆ ಹೇಗೋ ಹೆಸರನ್ನಿಡುವುದು ಸರಿಯಲ್ಲ. ಹೆಸರನ್ನಿಡುವುದೇನೋ ತಂದೆತಾಯಿಗಳು. ಆದರೆ, ಅದರ ಹೊರೆಯನ್ನು ಹೊರುವುದು ಮಾತ್ರ ಬಡಪಾಯಿ ಮಕ್ಕಳು! ಆದ್ದರಿಂದ, ಮಕ್ಕಳಿಗೆ ಹೆಸರನ್ನಿಡುವಾಗ ಸಮಾಜ ಆ ಹೆಸರನ್ನು ಹೇಗೆ ನೋಡಬಹುದು ಎಂಬುದರ ಪರಿವೆಯೂ ನಮಗಿರಬೇಕು. ಜಾಗರೂಕತೆಯಿಂದ ಹೆಸರನ್ನಿಡಬೇಕು. ಒಟ್ಟಾರೆ ನನ್ನ ಈ ಬರಹದ ಉದ್ದೇಶ ಇಶ್ಟೆ - ’ಇಂಪಾದ ಇಲ್ಲ ಆದುನಿಕ ಎನಿಸುವ ಹೆಸರುಗಳು ಬರೀ ಸಂಸ್ಕ್ರುತದ ಸೊತ್ತಲ್ಲ. ದ್ರಾವಿಡ ನುಡಿಗಳಲ್ಲೂ ಅವು ಇವೆ. ಮಕ್ಕಳ ಹೆಸರನ್ನು ಆಯುವಾಗ ಕನ್ನಡ ಮತ್ತು ಉಳಿದ ದ್ರಾವಿಡ ನುಡಿಗಳಲ್ಲೂ ಒಮ್ಮೆ ಕಣ್ಣಾಡಿಸುವುದು ಒಳ್ಳೆಯದು. ಹಾಗೆ ಮಾಡುವುದರಿಂದ ಮುದ್ದಾದ ಹಾಗೂ ಸಾಮಾನ್ಯವಲ್ಲದ ಹೆಸರುಗಳು ನಮ್ಮ ನುಡಿಗಳಲ್ಲೇ ನಮಗೆ ಸಿಗಬಹುದು.’
ನಲ್‍ಮೆಯೊಡನೆ,
ಎಚ್.ಎಸ್. ರಾಜ್
ಕನ್ನಡಿಗರಿಗೆ ತಾವು ಕೂಡ ಉಳಿದ ತೆಂಕಣದ ಮಂದಿಯಂತೆ ದ್ರಾವಿಡ ಬುಡಕಟ್ಟಿಗೆ ಸೇರಿದವರೆಂಬ ಅರಿವು ಇಲ್ಲ. ದ್ರಾವಿಡತನದ ಈ ಅರಿವನ್ನು ಅವರಲ್ಲಿ ಮೂಡಿಸುವುದೇ ಈ ಮಿನ್ನೊರೆಯ ಗುರಿ. ಕನ್ನಡಿಗರ ದ್ರಾವಿಡತನದ ಬಗೆಗಿನ ಅನಿಸಿಕೆಗಳ ಕೊಡುಕೊಳುವಿನಲ್ಲಿ ನೀವೂ ಪಾಲ್ಗೊಳ್ಳಿ. ಪುಟ್ಟ ಬರಹಗಳನ್ನು ಕನ್ನಡದಲ್ಲಿ ಬರೆದು kannadigarudravidare@gmail.comಗೆ ಕಳಿಸಿಕೊಡಿ. ತಕ್ಕವೆನಿಸಿದುವನ್ನು ಪತ್ತಿಸಲಾಗುವುದು. ಬಳಗವನ್ನು ಸೇರಲು ಬಯಸುವವರು ’ಬಳಗ’ ಪುಟವನ್ನು ನೋಡಿ.
ಮಂಗಳವಾರ, ಜೂನ್ 25, 2013
ಸೋಮವಾರ, ಜೂನ್ 10, 2013
ಇಂಗ್ಲೀಶಿನೊಡನೆ ಕನ್ನಡದೊಲವನ್ನೂ ಕಲಿಸಬೇಕು
ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ.
ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ
ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ.
ಡಿ.ಎನ್.ಶಂಕರ
ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ
ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’ ಓದುಗೆಗಳನ್ನು ನೋಡಿ.
ಕಳೆದ ಏಪ್ರಿಲ್ಲಿನ ಎರಡನೇ ವಾರ ಇರಬೇಕು. ದೇವನಹಳ್ಳಿಯ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಆಗ ಅಲ್ಲಿ ಅಯ್ದಾರು ಕಾಲೇಜು ಹುಡುಗರು ನನ್ನ ಹತ್ತಿರವೇ ನಿಂತುಕೊಂಡು ಹರಟೆ ಹೊಡೆಯುತ್ತಿದ್ದರು. "ಏನ್ರಪ್ಪಾ, ಏನ್ ಓತ್ತಾ ಇದ್ದೀರಿ?" ಎಂದು ಆತ್ಮೀಯತೆಯಿಂದ ಪ್ರಶ್ನೆ ಮಾಡಿ ನಾನೂ ಕೂಡ ಸ್ವಲ್ಪ ಹೊತ್ತಿನಲ್ಲಿ ಅವರೊಂದಿಗೆ ಮಾತಿಗೆ ಸೇರಿಕೊಂಡೆ. ಮಾತಿನ ನಡುವೆ ಅವರಲ್ಲಿ ಒಬ್ಬ ಹುಡುಗ, ಯಾರೋ ಒಬ್ಬರ ಬಗ್ಗೆ ಮಾತಾಡುತ್ತ, "ಅವರು ಲಾಂಗಾಗಿದಾರೆ" ಎಂದು ಹೇಳಿದ. ’ಅವರು ಎತ್ತರವಾಗಿದ್ದಾರೆ’ ಎಂದು ಹೇಳುವುದು ಅವನ ಉದ್ದೇಶವಾಗಿತ್ತು. ನಾನು ಕೂಡಲೇ, "ಲಾಂಗಾಗಿದಾರೆ ಅಂತ ಅನ್ನಬಾರದು. ಟಾಲಾಗಿದ್ದಾರೆ ಅಂತ ಅನ್ಬೇಕು. ಲಾಂಗಾಗಿದಾರೆ ಅಂತಾನೂ ಹೇಳ್ಬೋದೇನೋ. ಆದರೆ, ಈಗೆಲ್ಲ ಸಾಮಾನ್ಯವಾಗಿ ಎಲ್ಲರೂ ಟಾಲ್ ಅಂತಾನೇ ಹೇಳೋದು" ಎಂದು ತಂತಾನೆ ಅವನಿಗೆ ಹೇಳಿಬಿಟ್ಟೆ. ನಾನು ಹೇಳಿದ್ದನ್ನು ಕೇಳಿ ಅವನ ಮುಕ ಕೊಂಚ ಮಂಕಾಯಿತು. ಅವನಿಗೆ ಬೇಸರವಾದದ್ದನ್ನು ನೋಡಿ, "ಬೇಜಾರ್ ಮಾಡ್ಕೋಬೇಡಪ್ಪಾ, ನಿನ್ನ ಇಂಗ್ಲೀಶ್ ಸರಿ ಆಗ್ಲಿ ಅನ್ನೋ ಒಳ್ಳೇ ಉದ್ದೇಶ್ದಿಂದ ಆಟೋಮ್ಯಾಟಿಕ್ಕಾಗಿ ಹೇಳ್ಬಿಟ್ಟೆ ಅಶ್ಟೇ. ಬೇರೆ ಇನ್ನೇನೂ ಅಲ್ಲ." ಎಂದು ನಾನು ತಕ್ಶಣವೇ ಕಳಕಳಿಯಿಂದ ಅವನಿಗೆ ಸಮಾದಾನ ಆಗುವಂತೆ ಹೇಳಿದೆ. ಹಾಗೆ ಮಾಡಿದ್ದರಿಂದ ಅವನ ಮುಕ ಮತ್ತೆ ಮೊದಲಿನಂತಾಯಿತು. ಬೇಗನೇ ಚೇತರಿಸಿಕೊಂಡ ಅವನು, "ಇಲ್ಲಿ ಎಲ್ರೂ ಲಾಂಗಾಗಿದಾರೆ ಅಂತಾನೇ ಹೇಳೋದು ಸಾರ್. ನೀವು ಬೆಂಗಳೂರಿನೋರು. ನಿಮ್ಮಶ್ಟ್ ಚನ್ನಾಗಿ ನಮಗೆ ಇಂಗ್ಲೀಶ್ ಬರ‍್ಲಿಕ್ಕೆ ಸಾದ್ಯಾನಾ?" ಎಂದು ’ಸಣ್ಣ ಊರಿನವರಿಗೆ ಇಂಗ್ಲೀಶ್ ಕಲಿಕೆಯಲ್ಲಿ ಅನ್ಯಾಯ ಆಗುತ್ತಿದೆ’ ಎನ್ನುವ ದಾಟಿಯಲ್ಲಿ ಕೇಳಿದ. "ಬೆಂಗ್ಳೂರ‍್ನವರಿಗೂ ಇಂಗ್ಲೀಶ್ ಸರಿಯಾಗಿ ಬರೋದಿಲ್ಲಪ್ಪ" ಎಂದು ಹೇಳಿ ನಾನು ಅವನಿಗೆ ಇನ್ನಶ್ಟು ಸಮದಾನ ಮಾಡಿದೆ. ಅಲ್ಲಿಂದ ನಮ್ಮ ಮಾತು ’ಇಂಗ್ಲೀಶ್ ಬೇಕೋ ಬೇಡವೋ, ಇಂಗ್ಲೀಶ್ ಎಶ್ಟು ಕಲೀಬೇಕು, ಯಾವ ವಯಸ್ಸಿನಿಂದ ಕಲೀಬೇಕು’ ಎಂದು ಮುಂತಾದ ವಿಶಯಗಳ ಕಡೆಗೆ ತಿರುಗಿತು.
’ಈಗ ಕೆಲಸ ಸಿಗಬೇಕು ಅಂದರೆ ಇಂಗ್ಲೀಶ್ ಬರಬೇಕು. ದೊಡ್ಡ ಊರುಗಳಲ್ಲಿ ಬೆಳೆದವರಿಗೆ ಇಂಗ್ಲೀಶ್ ಚೆನ್ನಾಗಿ ಬರುತ್ತದೆ. ಸಣ್ಣ ಊರಿನವರಿಗೆ ಇಂಗ್ಲೀಶ್ ಬರುವುದಿಲ್ಲ. ಇದರಿಂದಾಗಿ ಒಳ್ಳೆಯ ಕೆಲಸಗಳು ಪಟ್ಟಣದವರ ಪಾಲಾಗುತ್ತಿವೆ. ಕಡಿಮೆ ಸಂಬಳದ ಕೆಲಸಗಳು ಮಾತ್ರ ಹಳ್ಳಿಯವರಿಗೆ ಸಿಗುತ್ತಿವೆ. ಪಟ್ಟಣದ ಹುಡುಗರ ಜೊತೆ ಸ್ಪರ‍್ದಿಸುವುದು ಹಳ್ಳಿಯ ಹುಡುಗರಿಗೆ ತುಂಬಾ ಕಶ್ಟವಾಗಿದೆ. ಹಳ್ಳಿಯ ಹುಡುಗರಲ್ಲಿ ಕೀಳರಿಮೆ ಉಂಟಾಗಿದೆ. ಇಂಗ್ಲೀಶ್ ಬೇಕೇ ಬೇಕು. ಆದರೆ, ಚಿಕ್ಕ ಊರುಗಳಲ್ಲಿ ಇಂಗ್ಲೀಶನ್ನು ಅಶ್ಟು ಸರಿಯಾಗಿ ಕಲಿಸುತ್ತಿಲ್ಲ’ - ಒಟ್ಟಾರೆಯಾಗಿ ಹೀಗೆ, ಮಾತಿನ ವೇಳೆ ಆ ಹುಡುಗರು ಅವರ ಅಳಲನ್ನು ತೋಡಿಕೊಂಡರು. ಸರ‍್ಕಾರ ಪದವಿಗಾಗಿ ಓದುತ್ತಿರುವ ವಿದ್ಯಾರ‍್ತಿಗಳಿಗೆ ಇಂಗ್ಲೀಶಿನಲ್ಲಿ ಮಾತನಾಡುವುದನ್ನು ಕಲಿಸಲು ವಿಶೇಶವಾದ ಯೋಜನೆಗಳನ್ನು ಹಾಕಿಕೊಂಡಿರುವುದರ ಬಗ್ಗೆ ಇತ್ತೀಚೆಗೆ ನಾನು ಪತ್ರಿಕೆಯಲ್ಲಿ ಓದಿದ್ದೆ. ಅದರ ಬಗ್ಗೆ ಅವರನ್ನು ಕೇಳಿದೆ. ಆ ಯೋಜನೆಗಳ ಪರಿಚಯ ಅವರಿಗೆ ಇರಲಿಲ್ಲ. ’ಅಂತಹ ಯೋಜನೆ ಇದ್ದರೂ, ಇಂಗ್ಲೀಶಿನಲ್ಲಿ ಮಾತಾಡುವುದನ್ನು ಅಶ್ಟು ತಡವಾಗಿ ಕಲಿಸಿದರೆ ಹೆಚ್ಚು ಪ್ರಯೋಜನವಿಲ್ಲ. ಕಾನ್ವೆಂಟು ಶಾಲೆಗಳ ಹಾಗೆ ಚಿಕ್ಕ ವಯಸ್ಸಿನಿಂದಲೇ ಹೇಳಿಕೊಡಬೇಕು.’ ಎಂದು ಆ ಯೋಜನೆಯ ಬಗ್ಗೆ ಅವರು ಅಬಿಪ್ರಾಯ ಪಟ್ಟರು.
ಅಶ್ಟರಲ್ಲಿ ಬಸ್ಸು ಬಂತು. ಎಲ್ಲರೂ ಬಸ್ ಹತ್ತಿಕೊಂಡೆವು. ಬಸ್ಸಿನಲ್ಲಿ ಕುಳಿತು, ಅದುವರೆಗೂ ಮಾತಾಡಿದ್ದರ ಬಗ್ಗೆ ಯೋಚನೆ ಮಾಡಿದೆ. ನಮ್ಮ ಸಮಾಜದಲ್ಲಿರುವ ’ಇಂಗ್ಲೀಶಿನಲ್ಲಿ ಮಾತಾಡುವುದನ್ನು ಕಲಿತವರೇ ವಿದ್ಯಾವಂತರು, ಇಂಗ್ಲೀಶ್ ಬಾರದವರು ಅವಿದ್ಯಾವಂತರು’ ಎನ್ನುವ ದೋರಣೆ ನಿಜಕ್ಕೂ ತುಂಬಾ ಹಳೆಯದು. ನಾನು ಚಿಕ್ಕವನಾಗಿದ್ದಾಗಲೂ ಅದು ಇತ್ತು. ಇಂಗ್ಲೀಶರ ಆಡಳಿತ ಶುರುವಾದಾಗಲಿಂದಲೂ ಇಂಗ್ಲೀಶಿನಲ್ಲಿ ಮಾತನಾಡಲು ಬರುವುದು ನಮಗೆ ಒಂದು ಪ್ರತಿಶ್ಟೆಯ ಕುರುಹು ಆಗಿ ಬಂದಿರುವ ಹಾಗೆ ಕಾಣುತ್ತದೆ. ಇಂಗ್ಲೀಶ್ ಬರುವವರು ಅದು ಬಾರದವರಿಗೆ ಬಹಳ ಹಿಂದಿನಿಂದಲೂ ಕೀಳರಿಮೆ ಬರಿಸಿದ್ದಾರೆ. ಆದರೂ, ಕೆಲಸ ಪಡೆದುಕೊಳ್ಳುವ ವಿಶಯದಲ್ಲಿ ಇಂಗ್ಲೀಶ್ ಬಾರದಿರುವುದು ಹಿಂದೆ ಅಶ್ಟು ದೊಡ್ದ ತೊಡಕು ಎನಿಸಿರಲಿಲ್ಲ ಎಂದು ತೋರುತ್ತದೆ. ಆದರೆ ಈಗ, ಅದರಲ್ಲೂ ಜಾಗತೀಕರಣ ಬಂದ ಮೇಲೆ, ಸಮಾಜ ಇಂಗ್ಲೀಶಿಗೂ ಕೆಲಸ ದೊರಕಿಸಿಕೊಳ್ಳುವುದಕ್ಕೂ ಬಿಗಿಯಾಗಿ ತಳುಕು ಹಾಕಿರುವಂತೆ ಕಾಣುತ್ತಿದೆ. ಸಮಾಜ ಹಾಗೆ ಮಾಡಿರುವುದಕ್ಕೆ ಸರಿಯಾದ ಕಾರಣಗಳೂ ಇವೆ. ಒಂದೇ ಎಡೆಯಲ್ಲಿ ಬೇರೆ ಬೇರೆ ನುಡಿಗಳನ್ನು ಆಡುವವರು ವಾಸ ಮಾಡುವುದು ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಕಂಪನಿಗಳ ವಹಿವಾಟುಗಳು ಅಂತರ ರಾಶ್ಟ್ರೀಯ ಹರವನ್ನು ಪಡೆದುಕೊಳ್ಳುತ್ತಿವೆ. ಪ್ರಪಂಚದಗಲಕ್ಕೂ ಈಗ ಇಂಗ್ಲೀಶ್ ಕಲಿಕೆ ಬಿರುಸಿನಿಂದ ಸಾಗಿದೆ. ಆದ್ದರಿಂದ, ಇಂಗ್ಲೀಶ್ ಕಲಿಯುವುದು ಅಗತ್ಯವೂ ಉಪಯುಕ್ತವೂ ಅಗುತ್ತಿದೆ. ಒಟ್ಟಿನಲ್ಲಿ, ಇಂಗ್ಲೀಶ್ ಮಾತಾಡುವುದು ಬಂದರೆ ಕೆಲಸ ಮತ್ತು ಮನ್ನಣೆ - ಎರಡೂ ಸಿಗುತ್ತವೆ ಈಗ ನಮ್ಮ ಸಮಾಜದಲ್ಲಿ. ಹಾಗಾಗಿ, ಹಳ್ಳಿಯಾಗಲೀ ಪಟ್ಟಣವಾಗಲೀ, ಎಲ್ಲಾ ಕಡೆ ಈಗ ತಂದೆತಾಯಿಗಳು ತಮ್ಮ ಮಕ್ಕಳು ಇಂಗ್ಲೀಶ್ ಮಾತಾಡುವುದನ್ನು ಕಲಿಯಬೇಕು, ಅದರಲ್ಲೂ ಚಿಕ್ಕ ವಯಸ್ಸಿನಿಂದಲೇ ಕಲಿಯಬೇಕು ಎಂದು ಕಾತರಿಸುತ್ತಿದ್ದಾರೆ. ಆದ್ದರಿಂದಲೇ ಇಂಗ್ಲೀಶ್ ಮಾದ್ಯಮದ ಶಾಲೆಗಳಿಗೆ ಅಶ್ಟೊಂದು ಬೇಡಿಕೆ.
ಇಂಗ್ಲೀಶಿನಲ್ಲಿ ಮಾತನಾಡುವ ಆಸೆ ಬಾನಿಗೇರಿರುವುದು ಎಲ್ಲರಿಗೂ ಗೊತ್ತಿರುವ ವಿಶಯ. ಅದರಲ್ಲಿ ಹೊಸದೇನೂ ಇಲ್ಲ. ಇತ್ತೀಚೆಗೆ ಚುನಾವಣೆ ಸಂದರ‍್ಬದಲ್ಲಿ, ಜನತಾದಳ ಪಕ್ಶ ’ಬೆಂಗಳೂರಿನ ಪ್ರತಿ ವಾರ‍್ಡಿನಲ್ಲೂ ಒಂದು ಮಾದರಿ ಇಂಗ್ಲೀಶ್ ಶಾಲೆಯನ್ನು ತೆರೆಯುವುದಾಗಿ’ ಪ್ರಣಾಳಿಕೆಯಲ್ಲಿ ಹೇಳಿತು. ಶ್ರೀರಾಮುಲು ಅವರ ಪಕ್ಶ ಇನ್ನೂ ಮುಂದೆ ಹೋಗಿ ’ನಾಡಿನ ಎಲ್ಲಾ ಸರ‍್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಶನ್ನು ಕಲಿಸಿಕೊಡುವುದಾಗಿ’ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತು. ನಾಡಿನ ಮಂದಿ ತಮ್ಮ ಮಕ್ಕಳಿಗೆ ಇಂಗ್ಲೀಶ್ ಕಲಿಸುವುದಕ್ಕೆ ಎಶ್ಟು ಹಾತೊರೆಯುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಆದಾರ ಬೇಡ. ಮಂದಿಗೆ ಏನು ಬೇಕೋ ಅದನ್ನು ಕೊಡುತ್ತೇವೆ ಎಂದು ಹೇಳಿ ಮತ ಪಡೆದುಕೊಳ್ಳುವುದೇ ತಾನೆ ಪುಡಾರಿಗಳ ಚಾಳಿ? ಅದೇನೆ ಇರಲಿ, ತಂದೆತಾಯಿಗಳಲ್ಲಿ ಇಂದು ಅವರ ಮಕ್ಕಳು ಇಂಗ್ಲೀಶಿನಲ್ಲಿ ಅರಳು ಹುರಿದಂತೆ ಮಾತನಾಡಬೇಕು ಎಂಬ ಹಂಬಲ ಎಶ್ಟು ಬಲವಾಗಿ ಬೇರೂರಿದೆ ಅಂದರೆ, ಮಕ್ಕಳಿಗೆ ಇಂಗ್ಲೀಶ್ ಮಾತನಾಡುವುದನ್ನು ಕಲಿಸದೇ ಬೇರೆ ದಾರಿಯೇ ಇಲ್ಲ, ಎನ್ನುವ ಹಾಗಾಗಿದೆ. ಹಾಗಾಗಿ, ಎಲ್ಲಾ ಮಕ್ಕಳೂ ಹೇಗೋ ಒಂದು ಬಗೆಯಲ್ಲಿ ಇಂಗ್ಲೀಶ್ ಕಲಿತು ಮಾತನಾಡುವ ಕಾಲ ಇನ್ನು ದೂರ ಉಳಿದಿಲ್ಲ. ಇದು ನನ್ನಿ! ಇದು, ಕನ್ನಡ ಉಳಿಯಬೇಕು ಎಂದು ಬಯಸುವ ನಮ್ಮಂತಹವರೆಲ್ಲ ತಪ್ಪದೆ ತಲೆಯಲ್ಲಿಟ್ಟುಕೊಳ್ಳಬೇಕಾದ ಕಡು ನನ್ನಿ.
ಈಗ ಪ್ರಶ್ನೆ ಇದು - ಎಲ್ಲರೂ ಇಂಗ್ಲೀಶ್ ಮಾತನಾಡುವುದನ್ನು ಕಲಿತಾಗ ಕನ್ನಡ ಮಾತನಾಡುವವರು ಯಾರು? ಇಂಗ್ಲೀಶಿನ ವಾತಾವರಣದಲ್ಲಿ ಕನ್ನಡ ಮಾತಾಡುವುದನ್ನು ಉಳಿಸಿಕೊಳ್ಳುವುದು ಹೇಗೆ? ಎಲ್ಲರಿಗೂ ತಿಳಿದಂತೆ ಇಂಗ್ಲೀಶ್ ಬಲ್ಲವರಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ಇಂಗ್ಲೀಶನ್ನೇ ಆಡುತ್ತಾರೆ. ಇಂಗ್ಲೀಶ್ ಬಂದೂ ಕನ್ನಡವನ್ನೇ ಹೆಚ್ಚಾಗಿ ಆಡುವವರು ಕಡಿಮೆ. ಇಂಗ್ಲೀಶ್ ಆಡುವುದು ಹಲವು ವೇಳೆ ಪ್ರತಿಶ್ಟೆಗಾಗಿ ಮಾತ್ರ. ಪ್ರತಿಶ್ಟೆ ಮನುಶ್ಯರಿಗೆ ಅಶ್ಟು ಮುಕ್ಯ. ಆದರೆ, ಪ್ರತಿಶ್ಟೆ ಅಶ್ಟು ಮುಕ್ಯವಾದರೂ ಕೆಲವರಿಗಾದರೂ ಪ್ರತಿಶ್ಟೆಯನ್ನೂ ಮೀರಿದ ಕನ್ನಡದ ಒಲವು ಇರುತ್ತದೆ ಎನ್ನುವುದೂ ನಿಜ. ಇಂತಹವರನ್ನೂ ನಾವು ನೋಡುತ್ತೇವೆ. ಕನ್ನಡದ ಮೇಲೆ ಒಲವು ಮತ್ತು ಅಬಿಮಾನ ಇರುವವರು ಇಂಗ್ಲೀಶ್ ಬಂದರೂ ಕನ್ನಡವನ್ನೇ ಆಡುತ್ತಾರೆ. ಕನ್ನಡ ಮಾತಾಡುವುದನ್ನು ಉಳಿಸುವ ಸುಳುಹು ನಮಗೆ ಇಂತಹವರಿಂದ ಬಹುಶಹ ಸಿಗಬಹುದು.
ಮುಕ್ಯವಾಗಿ ನಮ್ಮ ಮಂದಿಗೆ ಮತ್ತು ಮಕ್ಕಳಿಗೆ ಕನ್ನಡದ ಬಗ್ಗೆ ಒಲವು ಮತ್ತು ಅಬಿಮಾನಗಳನ್ನು ಮೂಡಿಸಬೇಕು. ’ತಾಯ್ನುಡಿಯ ಬಗ್ಗೆ ಒಲವನ್ನು ಯಾರೂ ಕಲಿಸಬೇಕಾಗಿಲ್ಲ. ಅದು ತಾನಾಗೇ ಬರುತ್ತದೆ’ ಎನ್ನುವ ನಂಬಿಕೆ ಸುಳ್ಳು. ಇದಕ್ಕೆ ಇಂದಿನ ಇಂಗ್ಲೀಶ್ ಬರುವ ಕನ್ನಡಿಗರ ನಡವಳಿಕೆಯೇ ಸಾಕ್ಶಿ. ತಾಯ್ನುಡಿಯ ಪ್ರೀತಿ ಮತ್ತು ಅಬಿಮಾನಗಳನ್ನೂ ಕೂಡ ಬೇರೆ ವಿದ್ಯೆಗಳನ್ನು ಕಲಿಸುವ ಹಾಗೆಯೆ ಕಲಿಸಬೇಕು. ಕನ್ನಡದ ಮಟ್ಟಿಗೆ ಹೇಳುವುದಾದರೆ, ಕನ್ನಡ ಒಂದು ದ್ರಾವಿಡ ನುಡಿ, ಕನ್ನಡ ಆಡುವ ಪ್ರದೇಶದ ಹರವು ಅರ‍್ದಕ್ಕಿಂತಲೂ ಹೆಚ್ಚು ಕುಗ್ಗಿದೆ, ಒಮ್ಮೆ ಇಡೀ ದೇಶದ ಅಗಲಕ್ಕೂ ಹರಡಿದ್ದ ದ್ರಾವಿಡ ನುಡಿಗಳು ಇಂದು ಎಲ್ಲವನ್ನೂ ಕಳೆದುಕೊಂಡು ತೆಂಕಣದ ಬಾಗದಲ್ಲಿ ಮಾತ್ರ ಉಳಿದುಕೊಂಡಿವೆ, ಹೀಗೆ ಪ್ರಪಂಚದಲ್ಲಿ ಉಳಿದುಕೊಂಡಿರುವ ಕೆಲವೇ ಕೆಲವು ದ್ರಾವಿಡ ನುಡಿಗಳಲ್ಲಿ ಕನ್ನಡ ನುಡಿ ಮುಕ್ಯ, ಕನ್ನಡದ ನುಡಿಪಿನ (ಸಾಹಿತ್ಯದ) ಸಂಪತ್ತು ಸಾವಿರ ವರ‍್ಶಗಳನ್ನೂ ಮೀರಿದೆ, ಕನ್ನಡ ನುಡಿಯನ್ನು ಆಡುವವರದು ದ್ರಾವಿಡ ಬುಡಕಟ್ಟಿನ ಹಿನ್ನೆಲೆ, ದ್ರಾವಿಡರಿಗೆ ಇತಿಹಾಸದ ಉದ್ದಕ್ಕೂ ಹಿನ್ನಡೆ ಆಗಿದೆ - ಹೀಗೆ ಕನ್ನಡದ ಬಗ್ಗೆ ಎಲ್ಲ ವಾಸ್ತವ ವಿಶಯಗಳ ಅರಿವನ್ನು ತಿಳಿಸಿಕೊಡುವುದರಿಂದ ಕನ್ನಡಿಗರಿಗೆ ಕನ್ನಡದ ಮೇಲೆ ಅಬಿಮಾನ ಮೂಡಿಸಬಹುದು ಎಂಬುದು ನನ್ನ ನಂಬಿಕೆ. ತ್ರಿಬಾಶಾ ಸೂತ್ರದಿಂದಾಗಿ ಕೆಲಸಕ್ಕೆ ಬಾರದ ಹಿಂದೀಯನ್ನು ಕಲಿಸುವುದರಲ್ಲಿ ಸಮಯವನ್ನು ಪೋಲು ಮಾಡುವ ಬದಲು, ಅದೇ ಸಮಯದಲ್ಲಿ ನಮ್ಮ ವಿದ್ಯಾರ‍್ತಿಗಳಿಗೆ ಇಂಗ್ಲೀಶ್ ಮಾತಾಡುವುದನ್ನೋ ಅತವ ಕನ್ನಡದ ಬಗ್ಗೆ ಅಬಿಮಾನ ಬೆಳೆಸಿಕೊಳ್ಳುವುದನ್ನೋ ಕಲಿಸಿದರೆ ಒಳ್ಳೆಯದು ಎನಿಸುತ್ತದೆ ನನಗೆ.
’ಕನ್ನಡ ಮಾತನಾಡಿದರೆ ಕೆಲಸ ದೊರೆಯುತ್ತದೆ, ಕನ್ನಡ ಮಾತನಾಡಿದರೆ ಜನ ಬೆಲೆ ಕೊಡುತ್ತಾರೆ, ಕನ್ನಡ ಮಾತನಾಡಿದರೆ ಲಾಬ ಉಂಟು, ಕನ್ನಡ ಮಾತಾಡದೆ ಬೇರೆ ದಾರಿಯೇ ಇಲ್ಲ’ ಎಂಬ ನೆಲೆಯನ್ನು ದಿನನಿತ್ಯದ ಬದುಕಿನಲ್ಲಿ ನಮಗೆ ಸ್ರುಶ್ಟಿ ಮಾಡಲಿಕ್ಕೆ ಸಾದ್ಯವಾದರೆ ಕನ್ನಡ ಮಾತಾಡುವುದು ತಾನಾಗೇ ಉಳಿಯುತ್ತದೆ. ಆದರೆ, ಅಂತಹ ನೆಲೆಯನ್ನು ಉಂಟುಮಾಡುವುದು ಇಂದಿನ ಸನ್ನಿವೇಶದಲ್ಲಿ ಸುಲಬದ ಮಾತೆ? ಹಾಗಾಗಿ, ಕನ್ನಡಿಗರು ಕನ್ನಡ ಮಾತನಾಡುವುದನ್ನು ಬಿಡಬಾರದೆಂದರೆ, ಕನ್ನಡದ ಬಗ್ಗೆ ಒಲವನ್ನು ನಿರ‍್ದಿಶ್ಟ ಪ್ರಯತ್ನಗಳಿಂದ ಅವರಲ್ಲಿ ಮೂಡಿಸುವುದು ಅವಶ್ಯವಾಗುತ್ತದೆ. ಕನ್ನಡಿಗರು ’ಕನ್ನಡದಿಂದ ನನಗೇನು ಲಾಬ?’ ಎನ್ನುವ ಬದಲು ’ನನ್ನಿಂದ ಕನ್ನಡಕ್ಕೇನು ಲಾಬ?’ ಎಂದು ಕೇಳುವಂತಾಗಬೇಕು. ಇಂತಹ ಬಾವನೆ ಬರುವುದು ನಾವು ನಮ್ಮ ಕನ್ನಡವನ್ನು ಪ್ರೀತಿಸಿದರೆ ಮಾತ್ರ. ಹಾಗಾಗಿ, ಕನ್ನಡದ ಬಗ್ಗೆ ಪ್ರೀತಿ ಮೂಡಿಸುವ ಕೆಲಸ ಕನ್ನಡವನ್ನೂ ಕನ್ನಡ ಮಾತಾಡುವುದನ್ನೂ ಉಳಿಸುವ ಪ್ರಯತ್ನದಲ್ಲಿ ಒಂದು ಮುಕ್ಯವಾದ ಉಪಾಯ. ಆದರೆ, ಪ್ರಶ್ನೆ ಇದು - ಈ ಪ್ರಯತ್ನದಲ್ಲಿ ಗಟ್ಟಿ ನಿರ‍್ದಾರದಿಂದ ತೊಡಗುವ ಚಲ ನಮಗಿದೆಯೆ? ಇದಕ್ಕೆ ಕಾಲವೇ ಉತ್ತರ ಹೇಳಬೇಕು.

ಶನಿವಾರ, ಮೇ 25, 2013
ರಮ್ಯಾ ಮಾಡಿದ್ದು ತಪ್ಪೆ?
ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ.
ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ
ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ.
ಡಿ.ಎನ್.ಶಂಕರ
ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ
ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’ ಓದುಗೆಗಳನ್ನು ನೋಡಿ.
ಕಳೆದ ತಿಂಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಶದ ಹುರಿಯಾಳಿಗಾಗಿ ಕನ್ನಡ ಚಿತ್ರರಂಗದ ತಾರೆ ರಮ್ಯಾ ಶಾಂತಿನಗರ ಕ್ಶೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರು. ಶಾಂತಿನಗರ ಕ್ಶೇತ್ರದಲ್ಲಿ ತಮಿಳರ ಸಂಕ್ಯೆ ಹೆಚ್ಚು. ರಮ್ಯಾಗೆ ತಮಿಳಿನಲ್ಲಿ ಮಾತನಾಡುವುದು ಬರುತ್ತದೆ. ಒಂದು ಕಡೆ ಅವರ ಪ್ರಚಾರ ಮೆರವಣಿಗೆಯನ್ನು ನೋಡಲು ನೆರೆದಿದ್ದ ಮಂದಿಯಲ್ಲಿ ತಮಿಳರೇ ಹೆಚ್ಚು ಇದ್ದಿದ್ದರಿಂದ, ರಮ್ಯಾ ತಮಿಳಿನಲ್ಲೇ ಅವರನ್ನು ಉದ್ದೇಶಿಸಿ ಮಾತನಾಡಿದರು. ಪ್ರಚಾರದ ಹುರುಪಿನಲ್ಲಿದ್ದ ರಮ್ಯಾ ತಮಗೆ ಅರಿವಿಲ್ಲದಂತೆಯೇ ಹಾಗೆ ಸಹಜವಾಗಿ ತಮಿಳಿನಲ್ಲಿ ಮಾತನಾಡಿರಬಹುದು, ಇಲ್ಲ, ತಮಿಳರನ್ನು ಓಲಯ್ಸುವ ಸಲುವಾಗಿ ಉದ್ದೇಶಪೂರ‍್ವಕವಾಗೇ ತಮಿಳಿನಲ್ಲಿ ಮಾತನಾಡಿರಬಹುದು. ಕಾರಣ ಏನೇ ಇರಲಿ, ಚುನಾವಣಾ ಪ್ರಚಾರದಂತಹ ಹುರುಪಿನ ಸನ್ನಿವೇಶಗಳಲ್ಲಿ ಈ ರೀತಿ ಮತದಾರರನ್ನು ಪುಸಲಾಯಿಸುವುದು ತೀರಾ ಸಹಜ ಮತ್ತು ಸಾಮಾನ್ಯ. ಜನಸಾಮಾನ್ಯರು ಇಂತಹವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲ ಟೀವಿ ಚಾನೆಲ್ಲುಗಳ ಪರಿಯೇ ಬೇರೆ. ಒಂದು ಕನ್ನಡ ಚಾನೆಲ್, ರಮ್ಯಾ ತಮಿಳಿನಲ್ಲಿ ಮಾತನಾಡಿದ ಈ ಸಾಸಿವೆಯಂತಹ ಸಣ್ಣ ವಿಶಯವನ್ನು ಎತ್ತಿಕೊಂಡು ಬೆಟ್ಟದಶ್ಟು ದೊಡ್ಡದು ಮಾಡಿ ಎರಡು-ಮೂರು ಗಂಟೆಗಳ ಕಾಲ ರಮ್ಯಾರ ಮೇಲೆ ಹಾಗೂ ಪರೋಕ್ಶವಾಗಿ ತಮಿಳರ ಮೇಲೆ ವಿಶ ಕಾರಿತು. ಜೊತೆಗೆ, ತಾವೇ ಕನ್ನಡ ಬಕ್ತರು ಎಂದು ತಿಳಿದುಕೊಂಡಿರುವ ಕೆಲ ಕನ್ನಡಿಗರಿಂದಲೂ ಟೆಲಿಫೋನ್ ಕರೆಗಳನ್ನು ತೆಗೆದುಕೊಂಡು, ಅವರಿಂದಲೂ ವಿಶ ಕಾರಿಸಿತು.
ಚಾನೆಲ್ಲಿನವರ ಈ ’ಲಯ್‍ವ್’ ಕಾರ‍್ಯಕ್ರಮದ ಸುಳಿವು ಗೊತ್ತಾದಾಗ ಸ್ವತಹ ರಮ್ಯಾರೇ ಕರೆ ಮಾಡಿ ಸಮಜಾಯಿಶಿ ಕೊಡಲು ಪ್ರಯತ್ನಿಸಿದರು. ರಮ್ಯಾ ಕೊಂಚ ಯೋಚನೆ ಮಾಡಿದ್ದರೆ, ’ಪ್ರಚಾರದ ಗುಂಗಿನಲ್ಲಿದ್ದೆ. ತಮಿಳರ ಏರಿಯಾದಲ್ಲಿದ್ದೆ. ಸಹಜವಾಗೇ ನನಗೇ ಗೊತ್ತಿಲ್ಲದಂತೆ ತಮಿಳಿನಲ್ಲಿ ಮಾತನಾಡಿದೆ. ಕನ್ನಡವನ್ನು ಕಡೆಗಣಿಸಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ನಾನು ಕನ್ನಡದವಳು. ಕನ್ನಡಿಗರಿಂದ ನಾನು ಈ ಸ್ತಿತಿಯಲ್ಲಿ ಇದ್ದೇನೆ. ನಾನು ತಮಿಳಿನಲ್ಲಿ ಮಾತನಾಡಿದ್ದರಿಂದ ಕನ್ನಡಿಗರಿಗೆ ನೋವಾಗಿದ್ದರೆ, ಅವರಲ್ಲಿ ಕ್ಶಮೆ ಕೇಳುತ್ತೇನೆ’ ಎಂದು ಸರಳವಾಗಿ, ನಡೆದುದನ್ನು ನಡೆದಂತೆ ಹೇಳಿ ಬೆಂಕಿಯನ್ನು ಆರಿಸಬಹುದಾಗಿತ್ತು. ಆದರೆ, ಹಾಗೆ ಮಾಡುವ ಬದಲು ಅವರು ’ಬಾರತದಲ್ಲಿ ಹಲವು ಬಾಶೆಗಳಿವೆ. ಎಲ್ಲಾ ಬಾಶೆಗಳನ್ನೂ ನಾವು ಗವ್‍ರವಿಸಬೇಕು’ ಎಂದು ಮುಂತಾಗಿ ಉಪದೇಶಕ್ಕೆ ತೊಡಗಿ, ಕೆಸರಿಗೆ ದೊಡ್ಡ ಕಲ್ಲನ್ನು ಹಾಕಿ ಇನ್ನಶ್ಟು ರಾಡಿಯನ್ನು ತಮ್ಮ ಮೇಲೆ ಸಿಡಿಸಿಕೊಂಡರು!
ರಮ್ಯಾರ ಕರೆ ಮುಗಿದ ಬಳಿಕ ಚಾನೆಲ್ಲಿನವರ ಕನ್ನಡ ಕಳಕಳಿಯ ಕಾರ‍್ಯಕ್ರಮ ಇನ್ನಶ್ಟು ಜೋಶ್ ಪಡೆದುಕೊಂಡು ಮುಂದುವರೆಯಿತು. ಕಾರ‍್ಯಕ್ರಮ ನಡೆಸಿಕೊಡುತ್ತಿದ್ದ ’ಕನ್ನಡದ ಕಟ್ಟಾಳಿನ’ ಒಟ್ಟಾರೆ ತಕರಾರು ಇದಾಗಿತ್ತು - ’ನಮ್ಮ ನಾಡಿನಲ್ಲೇ ನಾವು ಕನ್ನಡವಲ್ಲದ ಬಾಶೆಯಲ್ಲಿ ಮತ ಕೇಳಲು ತೊಡಗಿದರೆ ಕನ್ನಡದ ಪಾಡೇನು?’. ಈ ಕಾರ‍್ಯಕ್ರಮ ನಡೆದ ಕೆಲ ದಿನಗಳ ಮುಂಚೆಯಶ್ಟೇ ಉತ್ತರದ ಬೀಜೇಪಿ ಮುಂದಾಳುಗಳು ಬಂದು ’ಕನ್ನಡ’ ನಾಡಿನಲ್ಲಿ ಹಿಂದೀಯಲ್ಲಿ ಬಾಶಣ ಬೊಗಳಿ ಹೋಗಿದ್ದರು. ಅದು ನಡೆದಿರುವುದು ಈ ನಮ್ಮ ಕಾರ‍್ಕ್ರಮ ನಡೆಸುತ್ತಿದ್ದ ಆಳಿನ ತಲೆಯೊಳಗಿತ್ತು. ಅದಕ್ಕಾಗಿಯೋ ಏನೋ, ಆತ, ’ನರೇಂದ್ರ ಮೋದಿಯಂತವರು ಹಿಂದೀಯಲ್ಲಿ ಬಾಶಣ ಮಾಡಿದರೆ ನಾವು ಅದನ್ನು ಮನ್ನಿಸುತ್ತೇವೆ. ಏಕೆಂದರೆ, ಅವರಿಗೆ ಕನ್ನಡ ಬರುವುದಿಲ್ಲ’ ಎಂದು ಪದೇ ಪದೇ ಹೇಳುತ್ತಿದ್ದರು. ಹೇಗಿದೆ ನೋಡಿ ಈ ವರಸೆ! ದೇಶದ ಎಲ್ಲೆಡೆಯಲ್ಲೂ ಹಿಂದೀಯ ಒಡೆತನವನ್ನು ಸ್ತಾಪಿಸಬೇಕು ಎಂದು ಟೊಂಕ ಕಟ್ಟಿರುವ ’ಕೇಸರಿಗಳು’ ಬಂದು, ಎಳ್ಳಶ್ಟೂ ಅಳುಕದೆ ಹಿಂದೀಯಲ್ಲಿ ನಮ್ಮ ಮುಂದೆ ಬೊಗಳಿ ಹೋಗುವುದನ್ನು ಕನ್ನಡದ ಕಳಕಳಿ ಇರುವ ಯಾರೇ ಆದರೂ ಕಂಡಿಸಬೇಕು. ಅದನ್ನು ಬಿಟ್ಟು ಈ ಮಹಾನುಬಾವರು ಕೇಸರಿಗಳ ದಬ್ಬಾಳಿಕೆಯನ್ನು ಸ್ವ ಇಚ್ಚೆಯಿಂದ ಸಮ್ರ‍್ತಿಸಿಕೊಳ್ಳುತ್ತಿದ್ದಾರೆ! ಇವರ ಪ್ರಕಾರ ಕನ್ನಡ ಬರದವರು ಬೇರೆ ಬಾಶೆಯಲ್ಲಿ ಬಾಶಣ ಮಾಡಿದರೆ ತೊಂದರೆ ಇಲ್ಲ ತಾನೆ? ಹಾಗಾದರೆ, ಕನ್ನಡ ಬಾರದ ಯಾರೋ ಒಬ್ಬ ತಮಿಳು ಮನ್ನನ್ ತಮಿಳುನಾಡಿನಿಂದ ಬಂದು ತಮಿಳು ಅರ‍್ತವಾಗುವ ಬೆಂಗಳೂರಿನ ಕನ್ನಡಿಗರನ್ನು ಉದ್ದೇಶಿಸಿ ತಮಿಳಿನಲ್ಲಿ ಬಾಶಣ ಮಾಡಿದರೆ, ಚಾನೆಲ್ಲಿನ ಈ ಮನುಶ್ಯ ಅದನ್ನು ಮನ್ನಿಸುತ್ತಾರೆಯೆ? ಕನ್ನಡಿಗರು ಮನ್ನಿಸುತ್ತಾರೆಯೆ? ಈ ಪ್ರಶ್ನೆಯನ್ನು ಚಾನೆಲ್ಲಿನವರಿಗೆ ನೇರವಾಗಿ ಕೇಳಿಬಿಡೋಣ ಎಂದು ಫೋನ್ ಎತ್ತಿಕೊಂಡೆ. ಆದರೆ, ಎಶ್ಟು ಪ್ರಯತ್ನಿಸಿದರೂ ಸಂಪರ‍್ಕ ಸಿಗಲಿಲ್ಲ.
ಏನು ಹೇಳುವುದು ಸ್ವಾಮೀ ನಮ್ಮ ಅರಿವುಗೇಡಿತನಕ್ಕೆ! ಕನ್ನಡ ಮತ್ತು ತಮಿಳು - ಎರಡೂ ದ್ರಾವಿಡ ಬಾಶೆಗಳು. ಅಕ್ಕತಂಗಿಯರಿದ್ದ ಹಾಗೆ. ಕನ್ನಡಿಗರೂ ತಮಿಳರೂ ಒಟ್ಟಾರೆ ದ್ರಾವಿಡರೆ. ಒಬ್ಬರಲ್ಲೊಬ್ಬರಿಗೆ ಸಹಜ ಮಯ್‍ತ್ರಿ ಇರಬೇಕು. ಒಬ್ಬರ ನುಡಿಯನ್ನೊಬ್ಬರು ಆದರಿಸಬೇಕು. ಅದನ್ನು ಬಿಟ್ಟು, ನಮಗೆ ಸಂಬಂದವೇ ಇಲ್ಲದ ಉತ್ತರದ ಹಿಂದೀಗೆ ಮಣೆ ಹಾಕುತ್ತೇವೆ. ನಮ್ಮ ನಂಟಿರುವ ನಮ್ಮ ಪರಿವಾರದ್ದೇ ಆದ ತಮಿಳಿಗೆ ಕೆಂಗಣ್ಣು ಬಿಡುತ್ತೇವೆ! ಇದಕ್ಕೆ ಕಾರಣ ಏನು? ನಮ್ಮಲ್ಲಿ ಬಹುಮಂದಿಗೆ ನಮ್ಮ ದ್ರಾವಿಡತನದ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣ. ಕನ್ನಡ ಸಮುದಾಯದ ಚುಕ್ಕಾಣಿ ಹಿಡಿದವರು ತಲತಲಾಂತರದಿಂದ ಕನ್ನಡಿಗರ ಸಹಜ ದ್ರಾವಿಡತನವನ್ನು ಮರೆಮಾಜಿ, ಕನ್ನಡಿಗರನ್ನು ಉತ್ತರದ ಸಂಸ್ಕ್ರುತಿಯ ಕಡೆಗೆ ಓಲಿಸುತ್ತಾ ಬಂದಿರುವುದು ಕಾರಣ. ಇನ್ನಾದರೂ ನಾವು ಕನ್ನಡಿಗರು ಇಂತಹ ದ್ರೋಹಿಗಳು ಎರಚಿರುವ ಮಂಕುಬೂದಿಯ ಪ್ರಬಾವದಿಂದ ಹೊರಬರುವುದು ಒಳ್ಳೆಯದು.
ಕೆಲ ದಶಕಗಳ ಹಿಂದೆ ಬೆಂಗಳೂರಿನ ಕೆಲ ತಮಿಳು ಪ್ರದೇಶಗಳಲ್ಲಿ ಕನ್ನಡ ಬಾರದ ತಮಿಳರು ಇದ್ದುದು ದಿಟ. ಆದರೆ, ಈಗ ಸನ್ನಿವೇಶ ತುಂಬಾ ಮಾರ‍್ಪಟ್ಟಿದೆ. ಬೆಂಗಳೂರಿನಲ್ಲಿ ಬಹಳ ಕಾಲದಿಂದ ನೆಲೆಸಿರುವ ತಮಿಳರು ಕನ್ನಡವನ್ನು ಚೆನ್ನಾಗೇ ಮಾತಾಡುತ್ತಾರೆ. ಕನ್ನಡ ಮಾತಾಡುವುದಕ್ಕೆ ಅವರಿಗೆ ಬೇಸರವಿಲ್ಲ. ಅವರ ಪ್ರದೇಶಗಳಲ್ಲಿ ಕೂಡ ಅವರು ತಮಿಳಿನಲ್ಲೇ ನಾವು ಮಾತಾಡಬೇಕು ಎಂದು ಆಗ್ರಹಿಸುವುದಿಲ್ಲ. ತಮಿಳರು ಹೆಚ್ಚಾಗಿರುವ ಹಲಸೂರಿನಲ್ಲಿ ಮನೆಮಾಡಿಕೊಂಡಿರುವ ನನಗೆ ಇದು ಚೆನ್ನಾಗಿ ತಿಳಿದಿದೆ. ಬೆಂಗಳೂರಿನಲ್ಲಿ ಕೆಲ ಹಿಂದೀಯವರು ಮಾತ್ರ ಅವರ ಮಾತನ್ನೇ ಎಲ್ಲರೂ ಆಡಬೇಕೆಂದು ಬಯಸುವವರು. ತಮಿಳರಲ್ಲ. ತೆಲುಗರೂ ಮಲೆಯಾಳಿಗರೂ ಅಲ್ಲ. ಬೆಂಗಳೂರಿನಲ್ಲಿ ದ್ರಾವಿಡ ನುಡಿಗಳನ್ನಾಡುವ ಮಂದಿ ತಮ್ಮಶ್ಟಕ್ಕೆ ತಾವು ಒಬ್ಬರಿಗೊಬ್ಬರು ತೊಂದರೆ ಕೊಡದೆ ಬದುಕುತ್ತಿದ್ದಾರೆ. ಈ ಒಳ್ಳೆಯ ನೆಲೆಯನ್ನು ಇನ್ನೂ ಗಟ್ಟಿಗೊಳಿಸುವ ಬದಲು, ಅದಕ್ಕೆ ದಕ್ಕೆ ತರುವ ಕೇಡುಗ ಬುದ್ದಿಯನ್ನು ಕೆಲ ಅರಿವುಗೆಟ್ಟ ಸ್ವಾರ‍್ತಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕಾಗಿ ಆಗಾಗ್ಗೆ ತೋರಿಸುತ್ತಿರುತ್ತಾರೆ. ಅದಕ್ಕೆ ನಾವು ಸೊಪ್ಪು ಹಾಕುವ ದಡ್ಡತನ ತೋರಬಾರದು, ಅಶ್ಟೆ.

ಗುರುವಾರ, ಮೇ 09, 2013
ಬಲೇ ಅಮಿತಾಬ್ ಮತ್ತು ಸೋನಿಯಾ!
ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ.
ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ
ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ.
ಡಿ.ಎನ್.ಶಂಕರ
ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ
ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’ ಓದುಗೆಗಳನ್ನು ನೋಡಿ.
ಹಿಂದೀ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಇತ್ತೀಚಿನ ವರ‍್ಶಗಳಲ್ಲಿ ದೇಶದ ಒಳಿತಿಗಾಗಿ ಸರ‍್ಕಾರವೂ ಸಾರ‍್ವಜನಿಕರೂ ಹಮ್ಮಿಕೊಂಡಿರುವ ಹಲವಾರು ಯೋಜನೆಗಳಿಗೆ ರಾಯಬಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವುಗೊಂಡ ಹೆಸರಾಂತ ವ್ಯಕ್ತಿಗಳು ಹೇಗೆ ಸಮಾಜಕ್ಕೆ ಬೇರೆಬೇರೆ ಬಗೆಗಳಲ್ಲಿ ಒಳಿತು ಗಯ್ಯಬಹುದು ಎಂಬುದಕ್ಕೆ ಅವರು ಒಂದು ಬೆಳಗುವ ಆದರ‍್ಶವಾಗಿದ್ದಾರೆ. ನಮ್ಮ ದೇಶದ ಹುಲಿಗಳನ್ನು ಕಾಪಾಡುವ ಯೋಜನೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡು ಬಂದಿರುವ ರೀತಿಗೆ ಅವರನ್ನು ನಾನು ವಿಶೇಶವಾಗಿ ಮೆಚ್ಚಿದ್ದೇನೆ. ಇತ್ತೀಚೆಗೆ ಅವರನ್ನು ಇನ್ನಶ್ಟು ಮೆಚ್ಚುವ ಸಂಗತಿಯೊಂದು ನನ್ನ ಗಮನಕ್ಕೆ ಬಂತು. ಈ ಸಂಗತಿ ಬಹಳ ಮಂದಿಗೆ ವಿಶೇಶ ಎನಿಸದಿರಬಹುದು. ಆದರೆ, ಕನ್ನಡತನ ಹಾಗೂ ದ್ರಾವಿಡತನವನ್ನು ಮಯ್ಗೂಡಿಸಿಕೊಂಡಿರುವ ನನಗೆ ಅದರಲ್ಲಿ ಸೆರಪು (ವಿಶೇಶ) ಕಂಡದ್ದರಲ್ಲಿ ಸಂಶಯವಿಲ್ಲ. ಅದೇನೆಂದರೆ, ಟಯ್‍ಮ್ಸ್ ಆಫ್ ಇಂಡಿಯಾ ಪತ್ರಿಕೆಯ ಏಪ್ರಿಲ್ ೧೯ರ ಸಂಚಿಕೆಯಲ್ಲಿ ಬಚ್ಚನ್ ಅವರು ಇತ್ತೀಚೆಗೆ IPL ಕ್ರಿಕೆಟಿಗರ ಬಗ್ಗೆ ಕೊಟ್ಟ ಹೇಳಿಕೆಯನ್ನು ಪ್ರಕಟಿಸಿದ್ದಾರೆ. ಬಚ್ಚನ್ ಅವರ ಹೇಳಿಕೆ ಹೀಗಿದೆ - "Indian IPL players, you do not have to reply in English when questioned at the end of a game...reply in your mother tongue if uncomfortable.". ಈ ಹೇಳಿಕೆಯಲ್ಲಿ ಅದೇನು ಅಂತಾ ಸೆರಪು ಕಂಡಿತು ನನಗೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇದು - ಬಚ್ಚನ್ ಅವರು, 'reply in your mother tongue' ಎನ್ನುವ ಬದಲು ’reply in Hindi’ ಎಂದು ಹಾಗೇ ಸುಮ್ಮನೆ ಹೇಳಿಬಿಡಬಹುದಾಗಿತ್ತು. ಹಾಗೊಂದು ವೇಳೆ ಅವರು ’reply in Hindi’ ಎಂದೇ ಹೇಳಿದ್ದರೆ, ಯಾರೂ ಅದಕ್ಕೆ ಹುಬ್ಬೇರಿಸುತ್ತಿರಲಿಲ್ಲ. ಯಾರೂ ಅದಕ್ಕೆ ಎದುರು ಹೇಳುತ್ತಿರಲಿಲ್ಲ. ಯಾರೂ ಅದನ್ನು ಗಮನಿಸುತ್ತಲೂ ಇರಲಿಲ್ಲ. ಹಾಗಿದ್ದರೂ, ಬಚ್ಚನ್ ಅವರು ಬಾಶಾಸೂಕ್ಶ್ಮತೆಗೆ ಕುಂದು ಬರದ ಹಾಗೆ, ಹಿಂದೀಯೇತರರನ್ನೂ ಒಳಗೊಳ್ಳುವ ಹಾಗೆ 'reply in your mother tongue' ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ. IPL ಆಟಗಾರರಲ್ಲಿ ಹಿಂದೀ ತಾಯ್ನುಡಿಯಲ್ಲದವರೂ ಇದ್ದಾರೆ ಎಂಬುದನ್ನು ಮರೆಯದೆ, ಪ್ರಜ್‍ನಾಪೂರ‍್ವಕವಾಗಿ ಕೊಟ್ಟ ಹೇಳಿಕೆ ಇದು ಎಂಬುದು ನನ್ನ ನಂಬಿಕೆ. ಬಡಗಣ ರಾಜ್ಯಗಳ ಕೋಟಿ ಕೋಟಿ ಹಿಂದೀವಾದಿಗಳೂ ಹೀಗೇ ಕೊಂಚ ನುಡಿನಣ್ಪನ್ನು ತೋರಿದರೆ, ನಮ್ಮಲ್ಲಿ ಬಾಶಾಕಲಹಕ್ಕೆ ಎಡೆಯೇ ಇರುವುದಿಲ್ಲ, ಅಲ್ಲವೆ?
ಇನ್ನು ಈ ಕಳೆದ ಕೆಲ ನಾಳುಗಳಲ್ಲಿ ಬಾಶಾಸೂಕ್ಶ್ಮತೆ ತೋರಿದ ಇನ್ನೊಬ್ಬರು ಯಾರೆಂದರೆ ಕಾಂಗ್ರೆಸ್ ಪಕ್ಶದ ಮುಂದಾಳುಗಳು. ಚುನಾವಣೆಯ ಪ್ರಚಾರಕ್ಕೆಂದು ನಮ್ಮ ನಾಡಿನಲ್ಲಿ ಓಡಾಡಿದ ಕಾಂಗ್ರೆಸ್ ಪಕ್ಶದ ಮುಂದಾಳು ಸೋನಿಯಾ ಗಾಂದಿ, ಮಂಗಳೂರು ಬೆಂಗಳೂರುಗಳಂತಹ ಊರುಗಳಲ್ಲಿ ಇಂಗ್ಲೀಶಿನಲ್ಲಿ ಮಾತ್ರ ಪ್ರಚಾರ ಬಾಶಣಗಳನ್ನು ಮಾಡಿದರು. ಗುಲ್ಬರ‍್ಗದಲ್ಲಿ, ಬಹುಶಹ ಅಲ್ಲಿ ಹಿಂದೀ ಕೆಲಮಟ್ಟಿಗೆ ಚಲಾವಣೆಯಲ್ಲಿದೆ ಎಂಬ ಕಾರಣಕ್ಕೇನೋ, ಹಿಂದಿಯಲ್ಲಿ ಬಾಶಣ ಮಾಡಿದರು. ಒಟ್ಟಾರೆ, ಹೆಚ್ಚಿನ ಕಡೆ ಹಿಂದೀಯಲ್ಲಿ ಬಾಶಣ ಮಾಡದೇ ಇರುವ ಮೂಲಕ, ’ಕರ‍್ನಾಟಕ ತೆಂಕಣ ನಾಡು. ಕರ‍್ನಾಟಕದಲ್ಲಿ ಹಿಂದೀ ಆಡುವ ಉಡಾಫೆ ತೋರಿಸಬಾರದು’ ಎಂಬ ಬಾಶಾಸೂಕ್ಶ್ಮತೆಯನ್ನು ತೋರಿಕೆಗಾದರೂ ಅವರು ಮೆರೆದಿದ್ದಾರೆ. ’ನಾವೂ ಹಿಂದೊಮ್ಮೆ ಹಿಂದೀ ಹೇರಿಕೆಗೆ ವಿರೋದ ತೋರಿಸಿದ್ದೆವು, ನಮ್ಮ ದ್ರಾವಿಡತನವನ್ನೂ ಪ್ರಾದೇಶಿಕತೆಯನ್ನೂ ಮೆರೆದಿದ್ದೆವು’ ಎಂಬ ಸತ್ಯ ಅಲ್ಪಾವದಿ ನೆನಪಿನ ಶಕ್ತಿಯ ಕನ್ನಡಿಗರು ನಮಗೆ ಮರೆತು ಹೋಗಿರಬಹುದು. ಆದರೆ, ಕಾಂಗ್ರೆಸ್ ಪಕ್ಶಕ್ಕೆ ಇನ್ನೂ ಅದು ಮರೆತು ಹೋಗಿಲ್ಲ ಎನ್ನುವುದು ಸಮಾದಾನಕರ ಸಂಗತಿ.
ಕಾಂಗ್ರೆಸ್ಸಿನವರು ಹೀಗೆ ನಮ್ಮ ದ್ರಾವಿಡತನಕ್ಕೆ ಕೊಂಚವಾದರೂ ಬೆಲೆ ಕೊಟ್ಟರೆ, ಕೊಬ್ಬಿನ ಮೊಟ್ಟೆಗಳಾದ ಬೀಜೇಪಿಯ ’ನೇತಾಗಳು’ ಏನು ಮಾಡಿದವು ನೋಡಿ. ಹೋದ ಕಡೆಯೆಲ್ಲಾ ಬರೀ ಹಿಂದಿಯಲ್ಲೇ ಬೊಗಳಾಟ! ಬಾಶಣವನ್ನು ಕನ್ನಡದಲ್ಲಿ ಶುರು ಮಾಡುವ ’ಸ್ಟಂಟ್’ ಹಾಕುವುದು, ಬಳಿಕ ಹಿಂದೀಯಲ್ಲಿ ಗಂಟೆಗಟ್ಟಲೆ ಜಡಿಯುವುದು! ಕರ‍್ನಾಟಕ ಹಿಂದೀಗೆ ಸೋತು ಶರಣಾದ ಇನ್ನೊಂದು ರಾಜ್ಯ ಎನ್ನುವ ಬಾವನೆ ಅವರ ಬಗೆಯಲ್ಲಿ ಎಶ್ಟು ಗಟ್ಟಿಯಾಗಿ ನಿಂತಿದೆ ಎಂದರೆ, ಅವರು ಇಲ್ಲಿಗೆ ಬಂದು ಹಿಂದೀಯಲ್ಲಿ ಬಾಶಣ ಮಾಡುವುದಕ್ಕೂ ವ್ಯವಹರಿಸುವುದಕ್ಕೂ ಎಳ್ಳಶ್ಟೂ ಅಳುಕು ತೋರಿಸುವುದಿಲ್ಲ. ಕೇಸರಿ ಬಣದವರಿಗೆ ಇಡೀ ದೇಶವನ್ನು ಹಿಂದೀಮಯ ಮಾಡದಿದ್ದರೆ ತಿಂದದ್ದು ಅರಗುವುದಿಲ್ಲ, ಇರುಳಲ್ಲಿ ನಿದ್ದೆ ಬರುವುದಿಲ್ಲ. ಇಂತಹ ದಬ್ಬಾಳಿಕೆ ನಡೆಸುವ ಗರ‍್ವಿಗಳು ಹಾಕುವ ತಾಳಕ್ಕೆ ಕಮಕ್ ಕಿಮಕ್ ಎನ್ನದೆ ಕುಣಿಯುತ್ತೇವೆ ನಾವು! ಇದೇನು ನಾವು ಅಮಾಯಕರೋ, ಇಲ್ಲ, ಬೆಪ್ಪು ತಕ್ಕಡಿಗಳೋ, ಇಲ್ಲ, ಹೇಡಿಗಳೋ, ನಮ್ಮನ್ನು ಪಡೆದ ಆ ಕನ್ನಡ ತಾಯಿಗೇ ಗೊತ್ತಿರಬೇಕು!
ಇನ್ನು ಕಡೆಯದಾಗಿ, ಚುನಾವಣೆಯ ವೇಳೆಯಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ತಮಾಶೆಯ ವಿಶಯ. ಮತ ಹಾಕುವ ನಾಳು, ಬೀಜೇಪಿಯ ದೇಶಮಟ್ಟದ ’ನೇತಾ’ ವೆಂಕಯ್ಯ ನಾಯುಡು, ಸಾಲಿನಲ್ಲಿ ತಮ್ಮ ಸರದಿಗಾಗಿ ಕಾಯದೇ ನೇರವಾಗಿ ಅದಿಕಾರಿಗಳ ಬಳಿ ಹೋಗಿ, ’ನಾನು ಇಂತವನು. ನನಗೆ ಕೂಡಲೇ ಮತ ಹಾಕಲು ಬಿಡಿ’ ಎಂದು ಕೇಳಿಕೊಂಡರು. ಅದಿಕಾರಿಗಳು ಏನು ಮಾಡಿರುತ್ತಿದ್ದರೋ. ಆದರೆ, ಸಾಲಿನಲ್ಲಿ ಕಾಯುತ್ತಾ ನಿಂತಿದ್ದ ಮತದಾರರು ಅದಕ್ಕೆ ಅವಕಾಶ ಕೊಡಲಿಲ್ಲ. ಬೇರೆ ದಾರಿ ಇಲ್ಲದೆ, ನಾಯುಡು ಅವರು ತಮ್ಮ ಸರದಿಗಾಗಿ ಕಾದೇ ಮತ ಹಾಕಬೇಕಾಯಿತು. ಪೆಚ್ಚು ಮೋರೆ ಹಾಕಿಕೊಂಡು ಬಳಿಕ ಅವರು ಮಾದ್ಯಮದವರಿಗೆ ’ಏಕೆ ಹಾಗೆ ಸರದಿಗೆ ಕಾಯದಿರುವ ಆತುರ ತೋರಿಸಿದರು’ ಎಂಬುದನ್ನು ವಿವರಿಸಿದರು. ವಿವರಣೆ ಕೊಟ್ಟಿದ್ದು ಹಿಂದೀ ಮತ್ತು ಇಂಗ್ಲೀಶುಗಳಲ್ಲಿ. ಮತ್ತೆ ಅದೇ ಮೊಂಡಾಟ! ಬರೀ ಇಂಗ್ಲೀಶಿನಲ್ಲಿ ಬೊಗಳಿದ್ದರೆ ಸಾಕಿತ್ತಲ್ಲವೆ? ಹಿಂದೀ ಏಕೆ ಬೇಕಿತ್ತು?
ಅದೇನೇದರೂ ಇರಲಿ. ಹಿಂದೀ ಬಾಶಣಗಳಿಗೆ ಮತ್ತೆ ಎದುರು ತೋರಿಸುವುದನ್ನು ನಾವು ರೂಡಿಸಿಕೊಳ್ಳಬೇಕು. ನಾವು ಕನ್ನಡಿಗರು. ನಾವು ದ್ರಾವಿಡರು. ನಮಗೆ ನಮ್ಮದೇ ಆದ ದ್ರಾವಿಡ ನುಡಿ ಇದೆ. ನಮಗೆ ಕೆಲಸಕ್ಕೆ ಬಾರದ ಹಿಂದೀ ಬೇಡ.

ಸೋಮವಾರ, ಮಾರ್ಚ್ 25, 2013
ಮಣಿಯಿತು UPSC!
ವಿ.ಸೂ.: ವಿದಾನ ಸಬೆಯ ಚುನಾವಣೆ ಮುಗಿಯುವವರೆಗೆ, ಅಂದರೆ, ಮೇ ತಿಂಗಳ ಮೊದಲ ವಾರದವರೆಗೆ, ಬ್ಲಾಗನ್ನು ಬರೆಯುವುದರಿಂದ ಬಿಡುವು ತೆಗೆದುಕೊಂಡಿದ್ದೇನೆ - ಎಚ್.ಎಸ್.ರಾಜ್
ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’ ಓದುಗೆಗಳನ್ನು ನೋಡಿ.
ಕೋಟಿಗಟ್ಟಲೆ ಮಂದಿಗೆ ತಾಯ್‍ನುಡಿಗಳಾಗಿದ್ದರೂ ಕನ್ನಡ, ತಮಿಳು, ತೆಲುಗು, ಮರಾಟಿ ಮುಂತಾದ ನುಡಿಗಳಿಗೆ ಕೇವಲ ’ಪ್ರಾದೇಶಿಕ ಬಾಶೆ’ ಎಂಬ ಇಳಿಗೆಯ್ವ ಹಣೆಪಟ್ಟಿ ನಮ್ಮ ದೇಶದಲ್ಲಿ! ಸಾಲದುದಕ್ಕೆ ಅವುಗಳ ಮೇಲೆ ಹಿಂದೀ ಮತ್ತು ಇಂಗ್ಲಿಶ್ ನುಡಿಗಳ ಎಡೆಬಿಡದ ದಬ್ಬಾಳಿಕೆ ಬೇರೆ. ಯಾವಾಗ ಯಾವ ರೂಪದಲ್ಲಿ ಕುತ್ತುಗಳು ಬಂದು ಅವುಗಳ ಮೇಲೆ ಎರಗುತ್ತವೋ ಎಂದು ಹೇಳಲು ಬರುವುದಿಲ್ಲ. ’ಹೋದೆಯಾ ಪಿಶಾಚೀ ಎಂದರೆ, ಬಂದೆ ಗವಾಕ್ಶೀಲಿ!’ ಎನ್ನುವ ಹಾಗೆ, ಕನ್ನಡದಂತಹ ನುಡಿಗಳ ಮೇಲೆ ಹಿಂದೀ ಮತ್ತು ಇಂಗ್ಲೀಶುಗಳ ಹಾವಳಿ ತಪ್ಪಿದ್ದಲ್ಲ. ಕಳೆದ ಎರಡು ಮೂರು ವಾರಗಳಲ್ಲಿ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ಕೆಂದ್ರ ಲೋಕಸೇವಾ ಸಮಿತಿಯ (UPSC) ಹೊಸ ಪರೀಕ್ಶಾ ಕಟ್ಟಳೆಗಳೇ ಇದಕ್ಕೆ ಒಂದು ಅತ್ಯುತ್ತಮ ನಿದರ‍್ಶನ.
ಪ್ರಾದೇಶಿಕ ಬಾಶೆಗಳಲ್ಲಿ ಪ್ರಾವೀಣ್ಯತೆ ಇದ್ದು ಪ್ರಾದೇಶಿಕ ಬಾಶೆಗಳಲ್ಲೇ ಅಯ್. ಏ. ಎಸ್. ಮುಂತಾದ ಸೇವೆಗಳಿಗಾಗಿ ನಡೆಯುವ ಪರೀಕ್ಶೆಗಳಿಗೆ ಉತ್ತರಗಳನ್ನು ಬರೆಯಲು ಬಯಸುವ ಅಬ್ಯರ‍್ತಿಗಳಿಗೆ ಹಿನ್ನಡೆಯಾಗುವ ರೀತಿಯಲ್ಲಿ ಲೋಕಸೇವಾ ಸಮಿತಿ ತನ್ನ ಹೊಸ ಪರೀಕ್ಶಾ ವಿದಾನವನ್ನು ರೂಪಿಸಿ, ಜಾರಿಗೆ ತರಲು ಹೊರಟಿತ್ತು. ಸಹಜವಾಗೇ ಪ್ರಾದೇಶಿಕ ಬಾಶೆಗಳನ್ನಾಡುವವರಿಂದ ಇದಕ್ಕೆ ಎದಿರು ವ್ಯಕ್ತವಾಗಲು ತೊಡಗಿತು. ಲೋಕಸೇವಾ ಸಮಿತಿ ಬರೀ ಇಶ್ಟೇ ಬದಲಾವಣೆ ತಂದಿದ್ದರೆ, ಅಂದರೆ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಮಾತ್ರ ಹಿನ್ನಡೆಯಾಗುವ ಹಾಗೆ ಮಾರ‍್ಪಾಡುಗಳನ್ನು ತಂದಿದ್ದರೆ, ಅದರ ಎದುರು ಹೋರಾಡುವುದು ನಮ್ಮಂತಹ ಪ್ರಾದೇಶಿಕ ಬಾಶೆಗಳನ್ನಾಡುವವರಿಗೆ ದಿಟವಾಗಿಯೂ ಕಶ್ಟವಾಗುತ್ತಿತ್ತು. ಆದರೆ, ನಮ್ಮ ಅದ್ರುಶ್ಟ ಕೊಂಚ ಚೆನ್ನಾಗಿತ್ತು ಎಂದು ಕಾಣುತ್ತದೆ. ಏಕೆಂದರೆ, ಲೋಕಸೇವಾ ಸಮಿತಿ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಕೆಡುಕು ಮಾಡುವುದರ ಜೊತೆಗೆ, ಇಂಗ್ಲಿಶ್ ಬಾಶೆಗೆ ಒತ್ತು ಕೊಟ್ಟು, ಇಂಗ್ಲಿಶ್ ಬಾಶೆಯಲ್ಲಿ ಕುಶಲತೆ ಇರುವ ಅಬ್ಯರ‍್ತಿಗಳಿಗೆ ಒಳಿತಾಗುವ ಹಾಗೆ ಕೂಡ ಮಾರ‍್ಪಾಡುಗಳನ್ನು ಮಾಡಿತ್ತು. ಇದರಿಂದಾಗಿ, ಇಂಗ್ಲಿಶ್ ಅಶ್ಟಾಗಿ ಬಾರದ, ಹಿಂದಿಯಲ್ಲಿ ಮಾತ್ರ ಕುಶಲತೆ ಇರುವ ಮಂದಿಗೂ ಹಿನ್ನಡೆಯಾಗಿತ್ತು. ಹಾಗಾಗಿ, ಹಿಂದೀ ಆಡುಗರಿಂದಲೂ ಸಮಿತಿಯ ಹೊಸ ನೀತಿಗೆ ತೀವ್ರ ವಿರೋದ ವ್ಯಕ್ತವಾಯಿತು.
ಒಟ್ಟಿನಲ್ಲಿ, ಸಂಸತ್ತಿನಲ್ಲಿ ಹೆಚ್ಚುಕಡಿಮೆ ಎಲ್ಲಾ ಪಕ್ಶಗಳಿಂದಲೂ ಲೋಕಸೇವಾ ಸಮಿತಿ ಹೊರಡಿಸಿದ್ದ ಹೊಸ ನೀತಿಯ ಅದಿಸೂಚನೆಗೆ ಒಗ್ಗಟ್ಟಿನಿಂದ ಕೂಡಿದ ವಿರೋದ ವ್ಯಕ್ತವಾಯಿತು. ಪ್ರತಿಬಟನೆಯ ಗದ್ದಲ ಎಶ್ಟು ಗಟ್ಟಿಯಾಗಿತ್ತೆಂದರೆ, ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು. ಲೋಕಸೇವಾ ಸಮಿತಿಯ ತಲೆಯವರನ್ನು ಕೂಡಲೇ ವಜಾ ಮಾಡಿ ಎಂದು ಜೆಡಿಯು ಮುಂದಾಳು ಶರದ್ ಯಾದವ್ ಒತ್ತಾಯಿಸಿದರು. ಲಾಲೂ ಪ್ರಸಾದ್ ಯಾದವರ ಪಕ್ಶದ ಸದಸ್ಯ ರಗುವಂಶ್ ಸಿಂಗರು ಎರಡು ಬಾರಿ ಸಬಾದ್ಯಕ್ಶರ ಪೀಟದ ಕಡೆ ನುಗ್ಗಿ ಅದಿಸೂಚನೆ ವಿರುದ್ದ ಗೋಶಣೆ ಕೂಗಿದರು! ಇಂತಹ ಕಟ್ಟಿದಿರಿಗೆ ಮಣಿದು ಸರ‍್ಕಾರ ಬೇರೆ ದಾರಿ ಇಲ್ಲದೆ ಲೋಕಸೇವಾ ಸಮಿತಿಯ ಅದಿಸೂಚನೆಯನ್ನು ತಡೆಹಿಡಿಯುವ ನಿರ‍್ದಾರವನ್ನು ಪ್ರಕಟಿಸಿತು. ಇದೆಲ್ಲಾ ನಡೆದ ಎರಡು ನಾಳುಗಳ ಬಳಿಕ ಲೋಕಸೇವಾ ಸಮಿತಿ ತನ್ನ ಪರೀಕ್ಶಾ ಮಾದರಿಯನ್ನು ಮತ್ತೆ ರೂಪಿಸುವುದಾಗಿ ಹೇಳಿಕೆ ಕೊಟ್ಟಿತು. ಮತ್ತೆರಡು ದಿನಗಳಲ್ಲಿ, ಇಂಗ್ಲೀಶಿಗೆ ಕೊಟ್ಟಿರುವ ಒತ್ತನ್ನಶ್ಟೇ ಅಲ್ಲದೆ ಪ್ರಾದೇಶಿಕ ನುಡಿಗಳ ಮೇಲೆ ಹಾಕಿದ್ದ ಎಲ್ಲ ಅಡ್ಡಿಗಳನ್ನೂ ತೆಗೆದು ಹಾಕಿರುವುದಾಗಿ ಕೂಡಾ ತಿಳಿಸಿತು.
ಎಲ್ಲಾ ಪಕ್ಶಗಳೂ ಹೀಗೆ ಒಟ್ಟಿಗೆ ಎದುರು ತೋರಿಸಿದ್ದರಿಂದ ನಮ್ಮ ಕನ್ನಡಕ್ಕೆ ಕುತ್ತಾಗಿದ್ದ ಅದಿಸೂಚನೆಗೆ ಬೇಗನೇ ತಡೆ ಬಿದ್ದಿತು. ಈ ಗೆಲುವು ನಮಗೆ ಸಂತಸದ ವಿಶಯವೇನೋ ಸರಿ. ಆದರೆ, ಈ ಗೆಲುವಿಗೆ ಕಾರಣವಾದ ಹೋರಾಟದಲ್ಲಿ ನಮ್ಮ ಪಾಲು ಎಶ್ಟರ ಮಟ್ಟಿನದು ಎಂಬುದು ಸರಿಯಾಗಿ ತಿಳಿಯದು. ಏಕೆಂದರೆ, ನಾನು ನೋಡಿದ ಪತ್ರಿಕೆಗಳಲ್ಲಿ ನಮ್ಮ ಕನ್ನಡ ನಾಡಿನ ಸಂಸದರು ಹೋರಾಡಿದ ಬಗ್ಗೆ ನಿರ‍್ದಿಶ್ಟ ವರದಿಗಳಿರಲಿಲ್ಲ. ಅದೇನೇ ಇರಲಿ, ಕನ್ನಡದ ಸಂಗಟನೆಗಳಲ್ಲಾದರೂ ಕೆಲವು ಹಾಗೂ ಕನ್ನಡದ ಸಾಹಿತಿಗಳಲ್ಲಾದರೂ ಕೆಲವರು ಕಂಡಿತವಾಗಿಯೂ ಲೋಕಸೇವಾ ಸಮಿತಿಯ ಅದಿಸೂಚನೆಗೆ ಕಟುವಾದ ಪ್ರತಿಬಟನೆಯನ್ನು ಸೂಚಿಸಿದ್ದರು. ಅದೇ ವೇಳೆ ಬೆಂಗಳೂರಿನಲ್ಲಿ ನಡೆದ ತೆಲುಗು ವಿಜ್‍ನಾನ ಸಮಿತಿಯ ಸಮಾರಂಬದಲ್ಲೂ ಹಲವು ತೆಲುಗು ಗಣ್ಯರು ಅದಿಸೂಚನೆಯ ಬಗ್ಗೆ ವಿರೋದವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದರು. ಇದೆಲ್ಲಾ ನಮ್ಮಲ್ಲಿ ಆಶಾಬಾವನೆಯನ್ನು ಮೂಡಿಸುವ ಸಂಗತಿ.
ಲೋಕಸೇವಾ ಸಮಿತಿಯ ಅದಿಸೂಚನೆಯ ಬಗ್ಗೆ ಕಂಡು ಬಂದ ಪ್ರತಿಬಟನೆಯಲ್ಲಿ ಗಮನಿಸಬೇಕಾದ ಒಂದು ಮುಕ್ಯ ಅಂಶವಿದೆ. ಅದೇನೆಂದರೆ, ಹಿಂದೀವಾಲರ ಪ್ರತಿನಿದಿಗಳು ನಿಜಕ್ಕೂ ಪ್ರತಿಬಟಿಸಿದ್ದು ಇಂಗ್ಲೀಶಿಗೆ ಹೆಚ್ಚಿನ ಒತ್ತು ಸಿಕ್ಕಿದುದಕ್ಕೇ ಹೊರತು ಪ್ರಾದೇಶಿಕ ಬಾಶೆಗಳಿಗೆ ತೊಡಕು ಉಂಟಾದುದಕ್ಕಲ್ಲ! ಪರೀಕ್ಶೆಗಳ ಹೊಸ ಮಾದರಿಯಿಂದ ಪ್ರಾದೇಶಿಕ ಬಾಶೆಗಳಿಗೆ ಮಾತ್ರ ತೊಡಕು ಉಂಟಾಗಿದ್ದರೆ, ಹಿಂದೀ ನಾಡಿನ ಮುಂದಾಳುಗಳು ಚಕಾರವನ್ನಾದರೂ ಎತ್ತುತ್ತಿದ್ದರೆ? ಹಿಂದೀವಾಲರಿಗೆ ಪ್ರಾದೇಶಿಕ ಬಾಶೆಗಳ ಬಗ್ಗೆಯೂ ಸಹಾನುಬೂತಿ ಏನಾದರು ಇದೆಯೆ? ಇದು ಬಗೆದು ನೋಡಬೇಕಾದ ವಿಚಾರ.
ಈ ಸಲವೇನೋ ಕಾರಣಾಂತರದಿಂದ ಹಿಂದೀವಾಲರ ನೆರವು ನಮಗೆ ದೊರೆಯಿತು. ಆದರೆ, ಎಲ್ಲ ಸಂದರ‍್ಬಗಳಲ್ಲೂ ಅದು ದೊರೆಯಲಾರದು. ಆದ್ದರಿಂದ, ಎಲ್ಲ ಸಂದರ‍್ಬಗಳಲ್ಲೂ ನೆರವು ದೊರೆಯುವತ್ತ ನಮ್ಮ ಕೆಳೆಯ ಕಯ್ಯನ್ನು ನಾವು ಚಾಚಿರಬೇಕು. ಅಂದರೆ, ನಮ್ಮ ಹಾಗೇ ಕಶ್ಟಗಳನ್ನು ಎದುರಿಸಬೇಕಾದ ಬೇರೆ ಪ್ರಾದೇಶಿಕ ನುಡಿಗರಿಗೆ ನಮ್ಮ ಬೆಂಬಲವನ್ನು ನೀಡುತ್ತಿರಬೇಕು ಮತ್ತು ಅವರಿಂದ ಬೆಂಬಲವನ್ನು ಪಡೆದುಕೊಳ್ಳುತ್ತಿರಬೇಕು. ಮುಕ್ಯವಾಗಿ, ನಡೆನುಡಿಗಳಲ್ಲಿ ಹಾಗೂ ಬುಡಕಟ್ಟಿನಲ್ಲಿ ನಮ್ಮವರೆನಿಸುವ ನಮ್ಮ ಸಹದ್ರಾವಿಡರಾದ ತಮಿಳರು, ತೆಲುಗರು ಮತ್ತು ಮಲೆಯಾಳರೊಂದಿಗೆ ಸವ್‍ಹಾರ‍್ದವನ್ನೂ ಒಗ್ಗಟ್ಟನ್ನೂ ಮೂಡಿಸಿಕೊಳ್ಳಬೇಕು. ತೆಂಕಣರು ನಾವೆಲ್ಲ ದ್ರಾವಿಡತನವೆಂಬ ನಮ್ಮ ನನ್ನಿ ಹಿನ್ನೆಲೆಯ ಬಲದಿಂದ ಒಗ್ಗೂಡಬೇಕು. ಹೀಗೆ ಒಗ್ಗೂಡಿದರೆ, ಮರಾಟಿ ಮತ್ತು ಬಂಗಾಲಿಗಳಂತಹ ಬೇರೆ ಪ್ರಾದೇಶಿಕ ನುಡಿಗರ ನೆರವನ್ನು ಪಡೆದುಕೊಳ್ಳುವುದೂ ಹಗುರಾಗಬಹುದು. ಆಗ, ಕೇಂದ್ರದಿಂದ ಆಗಾಗ್ಗೆ ಬರುವ ಲೋಕಸೇವಾ ಸಮಿತಿಯ ಕೆಡುಕ ನೀತಿಗಳಂತಹ ಕುತ್ತುಗಳ ವಿರುದ್ದ ಹೋರಾಡುವುದು ನಮಗೆ ಬಹುಮಟ್ಟಿಗೆ ಸುಲಬವಾಗಬಹುದು. ನಮ್ಮ ನಡೆನುಡಿಗಳು ಉಳಿದುಕೊಳ್ಳಬಹುದು.
ನಲ್‍ಮೆಯೊಡನೆ,
ಎಚ್.ಎಸ್.ರಾಜ್

ಗುರುವಾರ, ಮಾರ್ಚ್ 14, 2013
ಗೋಹತ್ಯಾನಿಶೇದವೆಂಬ ದೊಂಬರಾಟ
ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ.
ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ
ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ.
ಡಿ.ಎನ್.ಶಂಕರ
ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ
ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’ ಓದುಗೆಗಳನ್ನು ನೋಡಿ.
ಬೆಳಗಾವಿಯ ಸುವರ‍್ಣ ಸವ್ದದಲ್ಲೂ ಶಾಸಕಸಬೆಯ ಅದಿವೇಶನ ನಡೆಯಿತು. ಅದಿವೇಶನದ ಕಡೆಯ ನಾಳು, ತರಾತುರಿಯಿಂದ ಆಡಳಿತ ಪಕ್ಶ ಆವುಗೊಲೆಗೆ ತಡೆ ಹಾಕುವ ಮಸೂದೆಯನ್ನು ಸದನದ ಮುಂದೆ ಚರ‍್ಚೆಗೆ ತಾರದೆ ಗುಟ್ಟುಗುಟ್ಟಾಗಿ ಅಂಗೀಕರಿಸಿತು. ಸ್ವಾಬಾವಿಕವಾಗಿಯೆ, ಸವರ‍್ಣೀಯ ಹಿಂದೂಗಳನ್ನು ಓಲಯ್ಸುವ ಆಡಳಿತ ಪಕ್ಶದ ಈ ನುಸುಳು ರಾಜಕಾರಣದ ನಡೆಯ ಬಗ್ಗೆ ಮರುದಿನಗಳಲ್ಲಿ ಟೀವೀ ಕಾಲುವೆಗಳಲ್ಲಿ ಪರ-ವಿರೋದಿ ಚರ‍್ಚೆಗಳು ನಡೆದವು. ಇಂತಹ ಒಂದು ಕಾರ‍್ಯಕ್ರಮದಲ್ಲಿ ಶಾಸಕ ಹಸನಬ್ಬನವರು, ’ಮುಸ್ಲಿಮರಲ್ಲಿ ಬಡವರೇ ಹೆಚ್ಚು. ಗೋಮಾಂಸ ಅಗ್ಗ. ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುತ್ತಿರುವುದು ಬಡತನದ ಅನಿವಾರ‍್ಯತೆಯಿಂದಾಗಿ. ಒಂದು ವೇಳೆ, ಕುರಿಯಡಗು ಗೋಮಾಂಸಕ್ಕಿಂತ ಅಗ್ಗವಾಗಿ ದೊರೆತರೆ, ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುವುದಿಲ್ಲ. ಸರ‍್ಕಾರ ಕುರಿಮಾಂಸ ಬಡವರಿಗೆ ರಿಯಾಯತಿ ದರದಲ್ಲಿ ಸಿಗುವಂತೆ ಮಾಡಬೇಕು’ ಎಂದು ಹೇಳಿದರು. ಅವರ ಹೇಳಿಕೆಗೆ ಶ್ರೀರಾಮ ಸೇನೆಯ ಮುತಾಲಿಕರು, ’ಹವುದು. ಆಕಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿಮಾಂಸವನ್ನು ಅಗ್ಗದ ಬೆಲೆಗೆ ಒದಗಿಸುವ ಏರ‍್ಪಾಟು ಆಗಬೇಕು’ ಎಂದು ಒಪ್ಪಿಗೆ ಸೂಚಿಸಿದರು. ಇದನ್ನೆಲ್ಲಾ ಕೇಳಿ ನಾನು ’ಶಿವ ಶಿವಾ’ ಎಂದುಕೊಂಡೆ.
ಇತ್ತೀಚೆಗೆ ಗೋಹತ್ಯೆಯ ಬಗ್ಗೆ ಇನ್ನೊಂದು ಕಾರ‍್ಯಕ್ರಮವನ್ನು ಟೀವೀಯಲ್ಲಿ ನೋಡಿದೆ. ಎಂಟನೇ ತರಗತಿಯ ಹಿಂದೀ ಪಟ್ಯಪುಸ್ತಕದಲ್ಲಿ ನಮ್ಮ ’ಗೋವಿನ ಹಾಡು’ ಒಂದು ಪಾಟದ ರೂಪದಲ್ಲಿ ಅಳವಟ್ಟಿದೆಯಂತೆ. ಆದರೆ, ಆ ಪಾಟದ ಕತೆಗೂ ನಮ್ಮ ಮೂಲ ಗೋವಿನ ಹಾಡಿನ ಕತೆಗೂ ಒಂದು ಆಕ್ಶೇಪಾರ‍್ಹ ವ್ಯತ್ಯಾಸವಿದೆಯಂತೆ. ಪಾಟದ ಕತೆಯಲ್ಲಿ, ಗೋವಿನ ಸತ್ಯಸಂದತೆಗೆ ಮೆಚ್ಚಿ, ಬಗೆನೊಂದು, ಹುಲಿ, ’ಇನ್ನೆಂದೂ ನಾನು ಗೋಮಾಂಸವನ್ನು ತಿನ್ನುವುದಿಲ್ಲ’ ಎಂದು ಪ್ರತಿಜ್ನೆ ಮಾಡುತ್ತದಂತೆ (ಮೂಲ ಗೋವಿನ ಹಾಡಿನಲ್ಲಿ ಹುಲಿ ಬೆಟ್ಟದ ತುದಿಯಿಂದ ಹಾರಿ ತಂಗೊಲೆ ಗೆಯ್ದುಕೊಳ್ಳುತ್ತದೆ). ಚರ‍್ಚೆಯಲ್ಲಿ ಪಾಲ್ಗೊಂಡಿದ್ದ ಕೆಲ ದಲಿತ ಮುಂದಾಳುಗಳ ಪ್ರಕಾರ, ಹೀಗೆ ಮೂಲ ಕತೆಯನ್ನು ತಿರುಚಿದ್ದು, ಹಿಂದುತ್ವಪರ ಸರ‍್ಕಾರದ ನುಸುಳು ರಾಜಕಾರಣ. ’ಗೋಮಾಂಸವನ್ನು ತಿನ್ನುವುದು ಕೆಟ್ಟದ್ದು’ ಎಂಬ ಪ್ರಜ್ನೆಯನ್ನು ಎಳೆಯ ಮಕ್ಕಳಲ್ಲಿ ಬರಿಸುವುದೇ ಇಲ್ಲಿನ ಉದ್ದೇಶ, ಎಂಬುದು ಅವರ ವಾದ.
ಈ ಮೇಲಿನ ಎರಡೂ ಚರ‍್ಚೆಗಳನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇದು - ’ಹಸು ಎಮ್ಮೆಗಳನ್ನು ಕಾಪಾಡುವುದಕ್ಕೆ ಸಾವಿರಾರು ಮಂದಿ ಇದ್ದಾರೆ. ಆದರೆ, ಕುರಿ ಕೋಳಿಗಳನ್ನು ಕಾಪಾಡುವುದಕ್ಕೆ ಮಾತ್ರ ಒಬ್ಬನೂ ಇಲ್ಲ! ಹಸು ಎಮ್ಮೆಗಳನ್ನು ತಿನ್ನುವುದು ದೊಡ್ಡ ಪಾಪ. ಅದೇ ಕುರಿ ಕೋಳಿಗಳನ್ನು ತಿನ್ನುವುದು ಪಾಪವಲ್ಲ, ಅತವ ಕಡಿಮೆ ಪಾಪ! ಹಸು ಎಮ್ಮೆಗಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿ ಕೋಳಿಗಳನ್ನು ರಿಯಾಯಿತಿ ದರದಲ್ಲಿ ಮಾರಿಸಲಿಕ್ಕೂ ಕೆಲವರು ಸಿದ್ದರಿದ್ದಾರೆ!’. ಅದೇನು ಪಾಪ ಮಾಡಿದ್ದವು ಸ್ವಾಮೀ ಕುರಿ ಕೋಳಿಗಳು? ಅವುಗಳ ನೋವು ನೋವಲ್ಲವೆ? ಪ್ರಾಣಿಗಳಲ್ಲೂ ಮೇಲು-ಕೀಳು ಎಣಿಸುವುದೇ?
ಪ್ರಾಣಿಗಳಲ್ಲಿ ಮೇಲು-ಕೀಳು ಎಣಿಸುವುದೂ, ಮಾನವರಲ್ಲಿ ಮೇಲು-ಕೀಳು ಎಣಿಸುವುದೂ, ಇಂತಹ ಅನ್ಯಾಯದ ಪರಿಕಲ್ಪನೆಗಳು ಸದ್ಯ ದಕ್ಶಿಣದ ನಾವು ದ್ರಾವಿಡರು ಹುಟ್ಟುಹಾಕಿದವಲ್ಲ. ಈ ವಿಶಯದಲ್ಲಿ ಅದೊಂದು ಸಮಾದಾನ ನನಗೆ. ಹಾಗೆಂದು ಉತ್ತರದಿಂದ ಬಂದ ಇಂತಹ ಕೀಳು ಆಚಾರಗಳನ್ನು ನಾವೇನೂ ನಡೆಸದೆ ಬಿಟ್ಟಿಲ್ಲ. ಇದು ನಿಶ್ಚಯವಾಗಿಯೂ ಒಂದು ಕೊರಗು ನನಗೆ. ಕೆಟ್ಟ ಪದ್ದತಿಗಳನ್ನು ಹುಟ್ಟುಹಾಕುವುದು ಎಶ್ಟು ಪಾಪವೋ, ಆ ಪಾಪಗಳನ್ನು ಒಪ್ಪಿ ಆಚರಿಸುವುದೂ ಅಶ್ಟೇ ಪಾಪ, ನನ್ನ ಕಣ್ಣಿನಲ್ಲಿ.
ಪ್ರಾಣಿಗಳ ವಿಶಯದಲ್ಲಿ ದಕ್ಶಿಣದ ಸಾದುಸಂತರು ಎಂತೆಂತಹ ಕನಿಕರದ ಮಾತುಗಳನ್ನಾಡಿದ್ದಾರೆ. ’ಇನ್ನೊಂದರ ಮಾಂಸ ತಿಂದು ತನ್ನ ಮೆಯ್ಯ ಮಾಂಸ ಹೆಚ್ಚಿಸಿಕೊಳ್ಳುವವನು, ಅದು ಹೇಗೆ ತಾನೆ ಕನಿಕರ ಉಳ್ಳವನಾಗುತ್ತಾನೆ?’ ಎಂದು ತಮಿಳಿನ ತಿರುಕ್ಕುರಲ್ ಬರೆದ ಸಂತ ವಳ್ಳುವಾರ್ ಕೇಳುತ್ತಾನೆ. ನಮ್ಮವನೇ ಆದ ಕನ್ನಡಿಗ ಬಸವಣ್ಣ ಹೇಳುತ್ತಾನೆ, ’ದಯೆಯೇ ದರ‍್ಮದ ಮೂಲವಯ್ಯಾ, ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂದು. ದಯೆ ಇರಬೇಕಾದುದು ’ಸಕಲ’ ಪ್ರಾಣಿಗಳಲ್ಲಿ. ಬರೀ ಹಸು ಮತ್ತು ಎಮ್ಮೆಗಳಲ್ಲಿ ಮಾತ್ರವಲ್ಲ. ಪ್ರಾಣಿದಯೆ ಸಾರುವ ಮಾತುಗಳು ಉತ್ತರದ ನಾಡುಗಳಲ್ಲೂ ಇರಬಹುದು. ಆದರೆ, ಅವುಗಳೊಂದಿಗೆ, ’ಕೆಲವು ಪ್ರಾಣಿಗಳು ದೇವರಿಗೆ ಸಮಾನ. ಅವಕ್ಕೆ ವಿಶೇಶವಾಗಿ ದಯೆ ತೋರಿರಿ’ ಎಂಬ, ’ಕೆಲವು ಪ್ರಾಣಿಗಳು ಶ್ರೇಶ್ಟ, ಉಳಿದವು ಅಲ್ಲ’ ಎಂದು ತಾರತಮ್ಯ ಮಾಡುವ ಮಾತುಗಳೂ ಅಲ್ಲಿವೆ. ದ್ರಾವಿಡರ ನಾಡಾದ ದಕ್ಶಿಣದಲ್ಲಿ ಈ ಬಗೆಯ ಇಬ್ಬಂದಿ ನೀತಿಯ ಸಂದೇಶಗಳು ನನಗೆ ತಿಳಿದಂತೆ ಇಲ್ಲ.
ನಮ್ಮ ದ್ರಾವಿಡ ಸಂತರು ಸಮತಾಬಾವದಿಂದ ಎಶ್ಟು ಮಾತು ಹೇಳಿದ್ದರೇನು? ನಾವಂತೂ ಅದನ್ನು ಪಾಲಿಸುತ್ತಿಲ್ಲ. ಸಮತಾಬಾವದ ಮಾತುಗಳು ಹೋಗಲಿ, ಅಸಮತೆಯೇ ಆದಾರವಾಗಿರುವ ಉತ್ತರದಿಂದ ಬಂದ ಆಚರಣೆಗಳಿಗೆ ಗಟ್ಟಿಯಾಗಿ ನಾವು ಜೋತುಬಿದ್ದಿದ್ದೇವೆ. ಮೇಲು-ಕೀಳಿನ ಎಣಿಕೆಯಿಂದ ಬಂದ ಉತ್ತರದ ನಂಬಿಕೆಗಳು ದಕ್ಶಿಣದ ದ್ರಾವಿಡರಾದ ನಮಗೆ ಎಂದೂ ಆದರ‍್ಶವಾಗಬಾರದು. ಆದರೂ, ಆಗಿವೆ. ಮುಂದೆ ಎಂದಾದರೊಂದು ದಿನ, ಬಸವಣ್ಣನ ’ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂಬ ಸಂದೇಶ ನಮಗೆಲ್ಲಾ ಆದರ‍್ಶಪ್ರಾಯವಾಗುತ್ತದೆ ಎಂದು ನಂಬೋಣ. ಆದರೆ, ಅಲ್ಲಿಯವರೆಗೆ, ’ಹಸು ಎಮ್ಮೆ ಮೇಲು, ಕುರಿ ಕೋಳಿ ಕೀಳು’ ಎನ್ನುವ ಇಬ್ಬಂದಿ ನೀತಿಯ ದೊಂಬರಾಟದಿಂದ ನಾವು ಹೊರಗಿರೋಣ.

ಸೋಮವಾರ, ಮಾರ್ಚ್ 04, 2013
ಮಹಿಶಿ ವರದಿ ಜಾರಿ ಮಾಡಿರಿ
ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ.
ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ
ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ.
ಡಿ.ಎನ್.ಶಂಕರ
ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ
ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’ ಓದುಗೆಗಳನ್ನು ನೋಡಿ.
ನಮ್ಮ ನೆಚ್ಚಿನ(?) ಮುಂದಾಳುಗಳೆ,
ಕನ್ನಡ ನಾಡಿನಲ್ಲಿ ಕನ್ನಡಿಗರಾದ ನಮಗೆ ನಮ್ಮ ಕವ್‍ಶಲ್ಯಕ್ಕೆ ತಕ್ಕ ಉದ್ಯೋಗ ದೊರೆಯುವುದು ನಮ್ಮ ಹುಟ್ಟಿನಿಂದಲೇ ಬಂದ ಹಕ್ಕು! ಅದನ್ನು ದೊರಕಿಸಿಕೊಡುವುದು ನಾವು ಆರಿಸಿ ಕಳಿಸಿರುವ ನಮ್ಮ ಮುಂದಾಳುಗಳಾದ ನಿಮ್ಮ ಕನಿಶ್ಟ ಕರ‍್ತವ್ಯ! ಆದರೆ, ನ್ಯಾಯವಾಗಿ ನಮಗೆ ದೊರೆಯಬೇಕಾದ ಕೆಲಸಗಳನ್ನು ನೀವು ನಮ್ಮಿಂದ ದೂರ ಮಾಡಿ ಹೊರನಾಡಿಗರ ಪಾಲು ಮಾಡುತ್ತೀರಿ. ಹಾಗೆ ಮಾಡಿ ನಮ್ಮ ಬದುಕನ್ನೇ ಕಸಿದುಕೊಳ್ಳುತ್ತೀರಿ. ಸಂಬಳ ತರುವ ಕೆಲಸವೇ ಇಲ್ಲದಿದ್ದರೆ ನಾವು ಬದುಕುವುದಾದರೂ ಹೇಗೆ? ಚೆಂದದ ಬಾಳನ್ನು ಕಟ್ಟಿಕೊಳ್ಳುವುದಾದರೂ ಹೇಗೆ?
ಮೊದಲಿಂದಲೂ ನಮ್ಮ ನಾಡನ್ನು ಮುನ್ನಡೆಸಿಕೊಂಡು(?) ಬಂದಿರುವ ಮುಂದಾಳುಗಳು ನೀವು, ನಮ್ಮ ಕೆಲಸಗಳನ್ನು ವಲಸಿಗರ ಮಡಿಲಿಗೆ ಹಾಕಿ, ನಮ್ಮ ಬದುಕಿಗೆ ಕತ್ತಲೆ ತುಂಬಿಸುತ್ತಾ ಬಂದಿದ್ದೀರಿ. ಇಪ್ಪತ್ತಯ್ದು ವರುಶಗಳ ಹಿಂದೆಯೇ ನಮ್ಮ ಉದ್ಯೋಗಗಳನ್ನು ಹೇಗೆ ಕಾಪಾಡಬೇಕು ಎಂದು ನಿಮಗೆ, ನೀವೇ ನೇಮಿಸಿದ ಸಮಿತಿಯೊಂದು ಸಲಹೆ ಮಾಡಿತ್ತು. ಅದರ ನೆನಪಿದೆ ತಾನೆ? ಸರೋಜಿನಿ ಮಹಿಶಿ ಸಮಿತಿ ಎಂದು ಅದರ ಹೆಸರು. ಅದರ ಸಲಹೆಗಳನ್ನು ನೀವು ತಡವಿಲ್ಲದೆ ಆಗಲೇ ಜಾರಿಗೆ ತರಬೇಕಾಗಿತ್ತು. ಆದರೆ, ತರಲಿಲ್ಲ. ಅದನ್ನು ಬಿಟ್ಟು, ನಮ್ಮ ಕೆಲಸಗಳನ್ನು ವಲಸಿಗರ ಕಯ್ಗಿಡುವ, ವಲಸಿಗರನ್ನು ಓಲಯ್ಸುವ ನಿಮ್ಮ ಎಂದಿನ ಚಾಳಿಯನ್ನು ತಡೆಯಿಲ್ಲದೆ ನಡೆಸಿಕೊಂಡು ಬಂದಿರಿ! ಅಶ್ಟು ಸಾಲದು ಎಂಬಂತೆ, ಈಗೀಗ, ’ಇಪ್ಪತ್ತಯ್ದು ವರುಶಗಳ ಹಿಂದಿನ ಹಾಗೆ ಇಂದಿನ ಪರಿಸ್ತಿತಿ ಇಲ್ಲ. ಹಾಗಾಗಿ, ಅಂದಿನ ಸಲಹೆಗಳನ್ನು ಇಂದು ಜಾರಿಗೆ ತರಲು ಬರುವುದಿಲ್ಲ’ ಎಂದು ಹೇಳುತ್ತಿದ್ದೀರಿ. ’ಕಳ್ಳನಿಗೊಂದು ಪಿಳ್ಳೆ ನೆವ’ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದೀರಿ. ನಮ್ಮ ಜಾಣ್ಮೆಯ ಮಟ್ಟವನ್ನೇ ಅಣಕಿಸುತ್ತಿದ್ದೀರಿ. ನಮ್ಮ ತಾಳ್ಮೆಯನ್ನು ಕೆಣಕುತ್ತಿದ್ದೀರಿ. ಇಶ್ಟು ವರುಶ ನಮಗೆ ಗಾಯ ಮಾಡಿದ್ದಲ್ಲದೆ, ಈಗ ಗಾಯದ ಮೇಲೆ ಬರೆಯನ್ನೂ ಎಳೆಯಲು ಹೊರಟಿದ್ದೀರಿ.
ನಮ್ಮ ಮುಂದಾಳುಗಳಾದ ನೀವು ಅಯ್‍ವತ್ತು ವರುಶಗಳ ಹಿಂದೆ ದೇಶದ ಒಗ್ಗಟ್ಟಿನ ಹೆಸರಿನಲ್ಲಿ ನಮ್ಮ ಮೇಲೆ ತಪ್ಪು ಬಾಶಾನೀತಿಯನ್ನು ಹೊರಿಸಿದಿರಿ. ’ಇಂತಹ ಕನ್ನಡಗುಲಿ ಬಾಶಾನೀತಿ ಬೇಡ’ ಎಂದ ಕುವೆಂಪು ಅಂತಹ ಮಹನೀಯರ ಎಚ್ಚರಿಕೆಗೆ ಜಾಣಕಿವುಡು ನಟಿಸಿದಿರಿ. ತ್ರಿಬಾಶಾ ಸೂತ್ರ ಎಂಬ ಉರುಳಿಗೆ ನಮ್ಮ ಕೊರಳನ್ನು ನೂಕಿದಿರಿ. ಹಿಂದೀ ಮಾರಿಗೆ ಕನ್ನಡದ ಕಂದಮ್ಮಗಳನ್ನು ಬಲಿಕೊಟ್ಟಿರಿ. ಅದರ ಪರಿಣಾಮ ಇಂದು ಏನಾಗಿದೆ ನೋಡಿ. ಜನಸಂಖ್ಯೆ ಮಿತಿ ಮೀರಿದ ಉತ್ತರದ ಹಿಂದೀ ನಾಡುಗಳಿಂದ ನಮ್ಮ ನಾಡಿಗೆ ವಲಸಿಗರ ಹೊಳೆಯೇ ಹರಿದು ಬರುತ್ತಿದೆ. ಲಕ್ಶಲಕ್ಶ ಹಿಂದೀಯರಿಗೆ ನಮ್ಮ ನಾಡಿನಲ್ಲಿ ಬಂದು ನೆಲೆಸುವುದೂ ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುವುದೂ ನಮ್ಮ ಬಾಯಲ್ಲೇ ಹಿಂದೀ ಆಡಿಸುವುದೂ ನೀರು ಕುಡಿದಷ್ಟು ಸರಾಗವಾಗಿದೆ. ಇದರಿಂದಾಗಿ, ನಾವು ಮತ್ತು ನಮ್ಮ ನಡೆನುಡಿಗಳು ನಮ್ಮ ನೆಲದಲ್ಲೇ ಮೂಲೆಗುಂಪಾಗುವ ಸ್ತಿತಿ ಬಂದೊದಗಿದೆ! ನಮ್ಮ ನಾಡಿನಲ್ಲೇ ನಾವು ಅಲ್ಪಸಂಕ್ಯಾತರೂ, ಎರಡನೇ ದರ‍್ಜೆಯ ಜನರೂ ಆಗುವ ಹೊತ್ತು ಹತ್ತಿರ ಬರುತ್ತಿದೆ. ಇಶ್ಟೆಲ್ಲಾ ಕೆಡುಕು ನಡೆಯುತ್ತಿದ್ದರೂ ಮುಂದಾಳುಗಳು ನೀವು ಏನು ಮಾಡುತ್ತಿದ್ದೀರಿ? ನಮಗಾಗಿ ಇರಬೇಕಾದ ಏರ‍್ಪಾಡುಗಳನ್ನು ವಲಸಿಗರಿಗೆ ಹೊಂದುವಂತೆ ಬದಲಾಯಿಸುತ್ತಿದ್ದೀರಿ. ನಮ್ಮ ಹಿರಿಯರು ನಮಗಾಗಿ ಕೂಡಿಟ್ಟ ನಮ್ಮ ನಾಡಿನ ಎಲ್ಲ ಸವಲತ್ತುಗಳನ್ನೂ ಸಂಪನ್ಮೂಲಗಳನ್ನೂ ವಲಸಿಗರ ಪಾಲು ಮಾಡುತ್ತಿದ್ದೀರಿ.
ನಮ್ಮ ನೆಚ್ಚಿನ(?) ಮುಂದಾಳುಗಳೆ, ಇನ್ನಾದರೂ ನಿಮ್ಮನ್ನು ನಂಬಿ ಆರಿಸಿ ಕಳಿಸಿದ ಹುಲು ಕನ್ನಡಿಗರ ಬಗ್ಗೆ ಕೊಂಚ ಯೋಚಿಸಿರಿ. ಸುಳ್ಳು ದೇಶಯ್‍ಕ್ಯತೆಯ ಪೊಳ್ಳು ನೀತಿಗಳನ್ನು ಅತ್ತ ತಳ್ಳಿ. ಕನ್ನಡತನವನ್ನು ಕಲಿತುಕೊಳ್ಳಿ. ಕನ್ನಡತನವನ್ನು ಕಲಿಸಿ. ಕನ್ನಡಿಗರಲ್ಲಿರುವ ತಮ್ಮತನದ ಅರಿವಿನ ಕೊರತೆಯನ್ನು ನೀಗಿಸಿ. ಕನ್ನಡಿಗರಿಗೆ ಅವರ ನಿಜವಾದ ಹಿನ್ನೆಲೆಯ ಬಗ್ಗೆ ಅರಿವು ಕಾಣಿಸಿ. ಕನ್ನಡ ನಡೆನುಡಿಗಳನ್ನು ಕಾಪಾಡಿ. ಕನ್ನಡಿಗರ ಬದುಕಿನ ನಾಳೆಗಳನ್ನು ಬೆಳಗಿಸಿ. ಕನ್ನಡಿಗರು ಹೊನ್ನಿನ ಬಾಳನ್ನು ಕಟ್ಟಿಕೊಳ್ಳುವುದಕ್ಕೆ ನೆರವಾಗಿ.
ಇಂತೀ ನಿಮ್ಮನ್ನು ಮತ್ತೆ ಮತ್ತೆ ನಂಬಿ ಆರಿಸಿ ಕಳಿಸುವ,
ಬಡಪಾಯಿ ಕನ್ನಡಿಗರು
(ಬರೆದವರು: ಎಚ್.ಎಸ್.ರಾಜ್ ಮತ್ತು ಪ್ರಶಾಂತ ಸೊರಟೂರ)

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)